ಬೆಳಗಾವಿ: ರಾಜ್ಯ ಬಿಜೆಪಿ ಸರಕಾರದ ನಾಯಕರೆಲ್ಲರೂ ಕೂಡಿಕೊಂಡು ಒಂದು ರೀತಿಯ ಕಲೆಕ್ಟಿವಿಟಿ ರೀತಿಯ ಕರಪ್ಷನ್ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತ್ನಾಡಿದ ಸತೀಶ್, ಬಿಜೆಪಿಯಲ್ಲಿ ಒಬ್ಬರಿಗಿಂತ ಒಬ್ಬರು ಡಿಫರೆಂಟ್ ಆಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಮತ್ತು ಅದನ್ನ ಒಬ್ಬರಿಗೊಬ್ಬರು ಡಿಫೆಂಡ್ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದೆ ವೇಳೆ, ಸಚಿವ ಶಶಿಕಲಾ ಜೊಲ್ಲೆ ವಿರುದ್ದದ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ಸುಮ್ಮನೆ ಕುಳಿತುಕೊಳ್ಳಲ್ಲ ಈ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತುತ್ತೇವೆ ಎಂದು ಕಿಡಿಕಾರಿದರು.
ಅಷ್ಟೊಂದು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದರು ಪುಣ್ಯ ಸರಕಾರ ಮತ್ತೆ ಅವರಿಗೆ ಸಚಿವ ಸ್ಥಾನ ಕೊಟ್ಟಿದೆ ಅಂದರೆ ಬಿಜೆಪಿ ಪಕ್ಷ ಯಾವ ಮಟ್ಟಿಗೆ ಭ್ರಷ್ಟಾಚಾರದಲ್ಲಿ ತೊಡಗಿರಬಹುದೆಂದು ಉಹಿಸಿಕೊಳ್ಳಿ ಎಂದು ಪ್ರಶ್ನೆ ಮಾಡಿದರು.
ಪುಣ್ಯ ಈ ಭಾರಿ ಅವರಿಗೆ ದೇವರ ಖಾತೆ ನೀಡಿದ್ದಾರೆ, ಸದ್ಯ ದೇವರ ಜಪ ತಪ ಮಾಡಲಿ ಎಲ್ಲ ಗುಡಿಗಳಿಗೆ ಒಳ್ಳೆದು ಮಾಡಲಿ ಎಂದು ಈ ಖಾತೆ ನೀಡಿದ್ದಾರೆ ಎಂದರು. ಈ ಮೊದ್ಲು ತತ್ತಿ ತಿಂದಿದ್ದರು, ಮುಂದೇನು ತಿನ್ನುತ್ತಿದ್ದರೋ ಏನು ಹೀಗಾಗಿ ಸಿಎಮ್ ಖಾತೆ ಬದಲವಾಣೆ ಮಾಡಿ ಒಳ್ಳೆದು ಮಾಡಿದ್ದಾರೆಂದು ಎಂದು ಲೇವಡಿ ಮಾಡಿದರು.
ಇನ್ನು ಮುಂದೆ ವಾರ ಬಂತಮ್ಮ ಗುರುವಾರ ಬಂತಮ್ಮ ಎಂದು ರಾಯರ ಜಪ ಮಾಡುವಂತಾಗಿದೆ ಎಂದು ಕುಹಕವಾಡಿದರು.
PublicNext
14/08/2021 02:00 pm