ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯಸಭೆ: ಮಹಿಳಾ ಮಾರ್ಷಲ್​​ ಮೇಲೆ ಕೈ ಸಂಸದರ ಹಲ್ಲೆ.!

ನವದೆಹಲಿ: ರಾಜ್ಯಸಭೆಯಲ್ಲಿ ನಿನ್ನೆ (ಬುಧವಾರ) ಕಾಂಗ್ರೆಸ್‌ ಸಂಸದರು ಮಹಿಳಾ ಮಾರ್ಷಲ್ ಮೇಲೆ ಕೈ ಮಾಡಿದ್ದಾರೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು. ರಾಜ್ಯಸಭೆಯಲ್ಲಿ ಒಬಿಸಿ ಮಸೂದೆ ಮಂಡನೆ ವೇಳೆ ವಿಪಕ್ಷಗಳು ಮಾಡಿದ ಗಲಾಟೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ. ಈ ವಿಡಿಯೋ ಇದೀಗ ವಿರೋಧ ಪಕ್ಷಗಳನ್ನ ಪೇಚಿಗೆ ಸಿಲುಕಿಸುವಂತೆ ಮಾಡಿದೆ.

ರಾಜ್ಯಸಭೆಯಲ್ಲಿ ನಿನ್ನೆ ನಡೆದ ಕೋಲಾಹಲಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್​ ಗಂಭೀರವಾದ ಆರೋಪವನ್ನ ಮಾಡಿತ್ತು. ಅದರಲ್ಲೂ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮಾತನಾಡಿ, ರಾಜ್ಯ ಸಭೆ ಕಲಾಪದ ವೇಳೆ ವಿರೋಧ ಪಕ್ಷದ ಸಂಸದ ಮೇಲೆ ಬಿಜೆಪಿ ಆರ್​​ಎಸ್​ಎಸ್​ನವರನ್ನ ಬಿಟ್ಟು ಹಲ್ಲೆ ಮಾಡಿಸಿದೆ ಎಂದಿದ್ದರು. ಆದರೆ ಸದ್ಯ ಬಿಡುಗಡೆಯಾಗಿರುವ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿದೆ.

Edited By : Vijay Kumar
PublicNext

PublicNext

12/08/2021 03:26 pm

Cinque Terre

54.25 K

Cinque Terre

3

ಸಂಬಂಧಿತ ಸುದ್ದಿ