ಕಾರ್ಕಳ: ಶಾಸಕ ಜಮೀರ್ ಅಹಮದ್ ಮೇಲೆ ಇಡಿ ವಿಚಾರವಾಗಿ ಬೆಳ್ಮಣ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಸುನಿಲ್ ಕುಮಾರ್ ,
ಕಾಂಗ್ರೆಸ್ ಒಂದು ಆಂತರಿಕ ಗೊಂದಲದ ಗೂಡಾಗಿದೆ.ಪರಮೇಶ್ವರ್, ಸಿದ್ದರಾಮಯ್ಯ, ಡಿಕೆಶಿ ಮೂರು ಬೇರೆ ಬೇರೆ ಗುಂಪುಗಳಿವೆ.ಕಾಂಗ್ರೆಸ್ ನ ಗುಂಪುಗಳು ಪರಸ್ಪರ ವೈರತ್ವ ಸಾಧಿಸುತ್ತಿವೆ.ಕಾಂಗ್ರೆಸ್ ಗೊಂದಲ ಆಗಾಗ ಒಂದೊಂದೇ ಬಹಿರಂಗ ಆಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಜಮೀರ್ ಅಹಮದ್ ಪ್ರಕರಣ ಆಂತರಿಕ ಗೊಂದಲದ ಒಂದು ಭಾಗ ಎಂದ ಸುನಿಲ್ ,ಹಾಲಾಡಿಯವರಿಗೆ ಪಕ್ಷ ಗೌರವ ಕೊಟ್ಟಿದೆ.
ಶ್ರೀನಿವಾಸ ಶೆಟ್ಟರಿಗೆ ಇನ್ನಷ್ಟು ಗೌರವ ಸಿಗಬೇಕು ಎಂಬ ನಿರೀಕ್ಷೆ ಸಹಜ.ಸಚಿವನಾಗಿ ನಾನು ಮಾಡುವ ಕೆಲಸಕ್ಕೆ ಶ್ರೀನಿವಾಸ್ ಶೆಟ್ಟಿ ಬೆಂಬಲ ಬೇಕು ಎಂದರು.ಸಚಿವ ಶ್ರೀನಿವಾಸ ಪೂಜಾರಿ, ಅಂಗಾರ ಅವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತೇನೆ.
ಬಿಜೆಪಿ ಹಾಲಾಡಿಯವರನ್ನು ಖಂಡಿತ ಗುರುತಿಸುತ್ತದೆ.ಪಕ್ಷ ಹಾಲಾಡಿಯನ್ನು ಕರೆದು ಮಾತನಾಡಿಸುತ್ತದೆ ಎಂದರು.
ವಿಜಯೇಂದ್ರ ಗೆ ಸೂಕ್ತಸ್ಥಾನಮಾನ ನೀಡುವುದನ್ನು ಬಿಜೆಪಿ ಹೈಕಮಾಂಡ್ ತೀರ್ಮಾನಿಸುತ್ತದೆ.ನಳಿನ್ ಕುಮಾರ್ ಕಟೀಲ್ ಅವರೇ ನಮ್ಮ ಅಧ್ಯಕ್ಷರು ಎಂದು ಬೆಳ್ಮಣ್ ನಲ್ಲಿ ಸಚಿವ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ.
PublicNext
06/08/2021 02:32 pm