ಕೋಲ್ಕತ್ತಾ: ಬಿಜೆಪಿ ಅಧಿಕಾರಕ್ಕೆ ಬಂದರೆ ಪಶ್ಚಿಮ ಬಂಗಾಳದಲ್ಲಿ ಪ್ರತಿಯೊಬ್ಬ ರೈತರಿಗೂ 18 ಸಾವಿರ ರೂ. ಹಣವನ್ನು ಬ್ಯಾಂಕ್ ಖಾತೆ ಹಾಕುತ್ತೇವೆ ಎಂದು ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಕೂಚ್ ಬೆಹರ್ಗೆ ಭೇಟಿ ನೀಡಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ 200 ಸೀಟ್ಗಳನ್ನ ಗೆಲ್ಲಲಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ಪಶ್ಚಿಮ ಬಂಗಾಳದ ಜನರಿಗಾಗಿ ಏನನ್ನೂ ಮಾಡಿಲ್ಲ. ಪ್ರತಿ ವರ್ಷವೂ ಕೇಂದ್ರ ಸರ್ಕಾರವು ರೈತರ ಅಕೌಂಟ್ಗೆ 6 ಸಾವಿರ ಹಣ ಹಾಕುತ್ತಿದೆ. ನಿಮ್ಮ ಅಕೌಂಟ್ಗೆ ಹಣ ಬರ್ತಾ ಇದೆಯಾ? ಬರಬೇಕೋ ಬೇಡವೋ ಎಂದು ಕಾರ್ಯಕ್ರಮದಲ್ಲಿ ಸೇರಿದ್ದ ಜನರಿಗೆ ಪ್ರಶ್ನಿಸಿದರು.
ಮಮತಾ ದೀದಿ ನಿಮ್ಮ ಅಕೌಂಟ್ ನಂಬರ್, ನಿಮ್ಮ ಹೆಸರುಗಳನ್ನೇ ನಮಗೆ ಕಳುಹಿಸಿಲ್ಲ. ಹೀಗಾಗಿ ನಿಮಗೆ ಹಣ ಬರುತ್ತಿಲ್ಲ. ನೀವು ಅವರನ್ನು ಮುಖ್ಯಮಂತ್ರಿ ಮಾಡಿದ್ದೀರಿ. ಅವರು ನಿಮಗಾಗಿ ಏನಾದರೂ ಮಾಡಿದ್ದಾರಾ? ಅವರು ನಿಮ್ಮ 6 ಸಾವಿರ ಹಣವನ್ನು ತಡೆದು ನಿಲ್ಲಿಸಿದ್ದಾರೆ. ಚಿಂತೆ ಮಾಡಬೇಡಿ. ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ. ಮೊದಲ ಕ್ಯಾಬಿನೆಟ್ನಲ್ಲೇ ನಿಮಗೆ ತಲುಬೇಕಿದ್ದ 12 ಸಾವಿರದ ಜೊತೆಗೆ ಮುಂದಿನ ಬಾರಿಯ 6 ಸಾವಿರ ರೂ. ಸೇರಿ ಒಟ್ಟು 18 ಸಾವಿರ ರೂ.ವನ್ನು ನಿಮ್ಮ ಅಕೌಂಟ್ಗೆ ಕಳುಹಿಸುವ ಕೆಲಸವನ್ನ ಮಾಡುತ್ತೇವೆ ಎಂದು ಹೇಳಿದರು.
PublicNext
11/02/2021 03:48 pm