ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿಗೆ ಬೈ ಬೈ : ಚೆನ್ನೈನತ್ತ ಚಿನ್ನಮ್ಮ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಸಂಬಂಧ ಕಳೆದ ನಾಲ್ಕು ವರ್ಷಗಳವರೆಗೆ ಬೆಂಗಳೂರಿನ ಕೇಂದ್ರ ಕಾರಾಗೃಹದ ಅತಿಥಿಯಾಗಿದ್ದ ಎಐಎಡಿಎಂಕೆಯ ಉಚ್ಛಾಟಿತ ನಾಯಕಿ ವಿ.ಕೆ. ಶಶಿಕಲಾ ಇಂದು ಬೆಂಗಳೂರಿನಿಂದ ಚೆನ್ನೈ ಕಡೆ ಮುಖ ಮಾಡಿದ್ದಾರೆ

ತಿರುವಣಮಲೈ ದೇವಸ್ಥಾನದ ಪ್ರಖ್ಯಾತ ಜ್ಯೋತಿಷಿಯನ್ನು ಸಂಪರ್ಕಿಸಿದ್ದ ಶಶಿಕಲಾ ಕುಟುಂಬಸ್ಥರು ಜ್ಯೋತಿಷಿಗಳ ಅಣತಿಯಂತೆ ಇಂದು ಶಶಿಕಲಾ ಚೆನ್ನೈಗೆ ತೆರಳುತ್ತಿದ್ದಾರೆ.

ಕಳೆದೊಂದು ವಾರದಿಂದ ನಗರದ ಪ್ರೆಸ್ಟಿಜ್ ಗಾಲ್ಫ್ ಶೈರ್ ಕ್ಲಬ್ ನಲ್ಲಿ ಕಾಲ ಕಳೆದಿದ್ದ ಶಶಿಕಲಾ ಅತ್ತಿಬೆಲೆ, ಹೊಸೂರು ಮಾರ್ಗವಾಗಿ ಶಶಿಕಲಾ ತಮಿಳುನಾಡನ್ನು ಸೇರಲಿದ್ದಾರೆ. ಅವರನ್ನು ಕರೆದೊಯ್ಯಲು ಖಾಸಗಿ ಎಸ್ಕಾರ್ಟ್ ಆಗಮಿಸಿದ್ದು, ಎಐಡಿಎಂಕೆ ಬಾವುಟವಿರುವ ಕಾರಿನಲ್ಲಿ ಶಶಿಕಲಾ ತಮಿಳುನಾಡಿನತ್ತ ಹೊರಟಿದ್ದಾರೆ. ಪೊಲೀಸರು ಮತ್ತು ಬೆಂಬಲಿಗರ ಭದ್ರತೆಯಲ್ಲಿ ಚೆನ್ನೈಗೆ ಪ್ರಯಾಣಿಸಲಿದ್ದಾರೆ.

ನಂದಿಬೆಟ್ಟದ ಬಳಿ ಇರುವ ರೆಸಾರ್ಟ್ನಿಂದ ಹೊರಟ ಶಶಿಕಲಾ ಅವರಿಗೆ ಬೆಂಬಲಿಗರು ಕುಂಬಳಕಾಯಿ ಒಡೆದು, ಬೆಂಗಳೂರಿನಿಂದ ಬೀಳ್ಕೊಟ್ಟು, ಚೆನ್ನೈಗೆ ಸ್ವಾಗತಿಸಿದ್ದಾರೆ.

ಶಶಿಕಲಾ ಜೊತೆ ಜೈಲು ಸೇರಿದ್ದ ಅವರ ಆಪ್ತೆ ಇಳವರಸಿ ಮತ್ತು ಸಂಬಂಧಿ ಟಿ.ಟಿ ದಿನಕರನ್ ಕೂಡ ಜೈಲಿನಿಂದ ಬಿಡುಗಡೆ ಆಗಿದ್ದು, ಅವರು ಕೂಡ ಚೆನ್ನೈಗೆ ತೆರಳುತ್ತಿದ್ದಾರೆ.ನಿನ್ನೆ ರಾತ್ರಿಯಿಂದಲೇ ರೆಸಾರ್ಟ್ ಬಳಿ ಜಮಾಯಿಸಿದ ಶಶಿಕಲಾ ಬೆಂಬಲಿಗರ ದಂಡು ಕಾರು, ಕ್ಯಾಬ್, ಟಿಟಿಗಳಲ್ಲಿ ತಂಡೋಪತಂಡವಾಗಿ ಆಗಮಿಸಿದ್ದಾರೆ. ಮೊದಲು ಜಯಲಲಿತಾ ಅವರ ಸಮಾಧಿಗೆ ಶಶಿಕಲಾ ನಮಸ್ಕರಿಸಲಿದ್ದಾರೆ. ರಾಜಕೀಯ ವಲಯದಲ್ಲಿ ಇವರ ಮುಂದಿನ ನಡೆಯ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ.

Edited By : Nirmala Aralikatti
PublicNext

PublicNext

08/02/2021 12:35 pm

Cinque Terre

62.62 K

Cinque Terre

3

ಸಂಬಂಧಿತ ಸುದ್ದಿ