ಬೆಂಗಳೂರು: ಇಂದು ಮಂಡನೆಯಾದ ಕೇಂದ್ರ ಬಜೆಟ್ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಇದು ಆತ್ಮ ನಿರ್ಭರ ಬಜೆಟ್ ಅಲ್ಲ, ಆತ್ಮ ಬರ್ಬಾದ್ ಬಜೆಟ್, ದಿವಾಳಿತನದ ಬಜೆಟ್. ನನಗೆ ಈ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಅದು ನಿಜ ಆಗಿದೆ ಎಂದು ವ್ಯಂಗ್ಯ ಮಾಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು.. ಈ ಬಾರಿ ಹೊಸದಾಗಿ ಕೃಷಿ ಸೆಸ್ ಅಂತ ಮಾಡಿದ್ದಾರೆ. ಎರಡೂವರೆಯಿಂದ ಮೂರು ಪರ್ಸೆಂಟ್ ಹಾಕಿದಾರೆ. ಲಿಕ್ಕರ್ ಮೇಲೆ ಹಂಡ್ರೆಡ್ ಪರ್ಸೆಂಟ್ ಹಾಕಿದ್ದಾರೆ. ಕೃಷಿ ಬೆಲೆ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗರಂ ಆಗಿದ್ದಾರೆ.
ವಿಮಾ ಕ್ಷೇತ್ರದಲ್ಲಿ 74% ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿದ್ಯುತ್ ಕ್ಷೇತ್ರ ಖಾಸಗಿಕರಣ ಆದರೆ ಅವರು ರೈತರಿಗೆ ಕಡಿಮೆ ದರದಲ್ಲಿ ವಿದ್ಯುತ್ ಕೊಡ್ತಾರಾ? ಸಾಮಾನ್ಯ ಜನರ ಬಳಕೆ ವಿದ್ಯುತ್ ದರ ಕೂಡ ಹೆಚ್ಚಾಗುತ್ತದೆ. ಇದರಿಂದ ಹಣದುಬ್ಬರ ಆಗುತ್ತದೆ. ಕೊರೊನಾದಿಂದ ಸಂಕಷ್ಟ ಅನುಭವಿಸಿದವರಿಗೆ ಯಾವ ರಿಲೀಫ್ ಕೂಡ ಸಿಕ್ಕಿಲ್ಲ. ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳಿಗೆ ಮಾತ್ರ ಹೆಚ್ಚು ಹಣ ಕೊಟ್ಟಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
PublicNext
01/02/2021 05:55 pm