ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: "ಆರತಿ ಎತ್ತಿ ಹೂವಿನ ಹಾರ ಹಾಕಿ ಕರೆಯೋಕಾಗುತ್ತಾ''... ಜಯ ಮೃತ್ಯುಂಜಯ ಶ್ರೀಗಳು ಹಿಂಗೆ ಹೇಳಿದ್ದೇಕೆ...?

ದಾವಣಗೆರೆ: "ಆರತಿ ಎತ್ತಿ ಹೂವಿನ ಹಾರ ಹಾಕಿ ಯಾರನ್ನೂ ಕರೆಯೋಲ್ಲ. ಸಮಾಜದ ಹಿತಕ್ಕೋಸ್ಕರ ಬರಬೇಕು'' ಎಂದು ಹೇಳುವ ಮೂಲಕ ಕೂಡಲಸಂಗಮದ ಪೀಠಾಧಿಪತಿ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಹರಿಹರದ ಪಂಚಸಮಾಲಿ ಪೀಠದ ವಚನಾನಂದ ಶ್ರೀಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಹರಿಹರ ಪಟ್ಟಣದಲ್ಲಿ ಮಾತನಾಡಿದ ಅವರು, ಮೀಸಲಾತಿಗಾಗಿ ನಡೆಸುತ್ತಿರುವ ಪಾದಯಾತ್ರೆ ಈಗ ದಾವಣಗೆರೆಯ ಹರಿಹರ ತಲುಪಿದೆ. ಹರಪನಹಳ್ಳಿಯಲ್ಲಿ ನಡೆದ ಪಾದಯಾತ್ರೆಗೆ ವಚನಾನಂದ ಶ್ರೀಗಳು ಬಂದಿದ್ದರು. ಆಮೇಲೆ ನೀಲಗುಂದ, ತೆಲಗಿ, ಗುತ್ತೂರು ಸೇರಿದಂತೆ ಬೇರೆ ಕಡೆ ನಡೆದ ಸಭೆಗಳಲ್ಲಿ ಭಾಗವಹಿಸಲಿಲ್ಲ‌. ಇದು ಬೇಸರ ತರಿಸಿದೆ. ಮುಂದಿನ ದಿನಗಳಲ್ಲಿ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು‌‌.‌

ವಚನಾನಂದ ಶ್ರೀ ಮಾತ್ರವಲ್ಲ, ನಾಡಿನ ಎಲ್ಲಾ ಮಠಾಧೀಶರನ್ನು ಮೀಸಲಾತಿ ಹೋರಾಟ ಬೆಂಬಲಿಸುವಂತೆ ಮನವಿ ಮಾಡಿದ್ದೇವೆ. ನನ್ನನ್ನು ಸ್ವಾಮೀಜಿ ಮಾಡಿದ್ದೇ ಮೀಸಲಾತಿ ಪಡೆಯಲು. ನಮ್ಮ ಮೇಲೆ‌ ಸಮಾಜದ ಋಣಭಾರ ಇದೆ ಎಂದು ತಿಳಿಸಿದರು.

ಯಾರೇ ಬರದಿದ್ದರೂ ಹೋರಾಟ ಮುಂದುವರಿಯುತ್ತದೆ. ಮಠಾಧೀಶರು ಒಗ್ಗಟ್ಟಾಗುವುದು ಮುಖ್ಯ ಅಲ್ಲ. ಸಮಾಜ, ಜನರು ಒಟ್ಟಾದರೆ ಎಲ್ಲವೂ ಯಶಸ್ವಿಯಾಗಲಿದೆ. ಪಂಚಮಸಾಲಿ ಸಮಾಜದ ಬಸನಗೌಡ ಪಾಟೀಲ್ ಯತ್ನಾಳ್, ವಿಜಯಾನಂದ ಕಾಶಪ್ಪನವರ್, ಹೆಚ್. ಎಸ್. ಶಿವಶಂಕರ್ ಸೇರಿದಂತೆ ಹಲವಾರು‌ ಮುಖಂಡರು ನಮ್ಮೊಂದಿಗೆ ಇದ್ದಾರೆ‌. ನಾನು ಬಸ್ ನ ಡ್ರೈವರ್. ಬಸನಗೌಡ ಪಾಟೀಲ್ ಕಂಡಕ್ಟರ್. ವಿಜಯಾನಂದ ಕಾಶಪ್ಪನವರ್, ಶಿವಶಂಕರ್ ಚಕ್ರಗಳು. ಮಾತ್ರವಲ್ಲ ಸಮಾಜದ ಜನರು‌ ಮನೆಯಿಂದ ಹೊರ ಬರಲ್ಲ. ಬಂದರೆ ಬೇಡಿಕೆ ಈಡೇರುವವರೆಗೆ ಬಿಡಲ್ಲ ಎಂದು ಗುಡುಗಿದರು.

Edited By : Nagesh Gaonkar
PublicNext

PublicNext

29/01/2021 04:07 pm

Cinque Terre

58.38 K

Cinque Terre

0

ಸಂಬಂಧಿತ ಸುದ್ದಿ