ಮೈಸೂರು: ರೈತರ ಆತ್ಮಹತ್ಯೆಗೆ ಅವರ ವೀಕ್ ಮೈಂಡ್ ಕಾರಣ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ. ಇದೇ ವೇಳೆ ನಾವು ಹಿಡಿತಾರೆ, ಹೊಡಿತಾರೆ ಅಂತ ಬಾಂಬೆಗೆ ಹೋಗಿದ್ವಿ ಎನ್ನುವ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಒಂದೇ ಸುದ್ದಿಗೋಷ್ಠಿಯಲ್ಲಿ ಎರಡೆರಡು ರೀತಿಯ ಹೇಳಿಕೆ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ಮಾನಸಿಕವಾಗಿ ಗಟ್ಟಿಯಾಗಿಲ್ಲದ ಯಾರೋ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದ ಸಚಿವ, ಮರುಕ್ಷಣವೇ ನಾವು ಭಯದಿಂದ ಬಾಂಬೆಗೆ ಹೋಗಿದ್ದೆವು ಎಂದರು.
ಮೈತ್ರಿ ಸರ್ಕಾರ ಪತನ ಸಂದರ್ಭದಲ್ಲಿ ಕರ್ನಾಟಕದಲ್ಲಿ ಭಯಾನಕ ವಾತಾವರಣ ಇತ್ತು. ನಮ್ಮನ್ನು ಹಿಡಿತಾರೆ, ಹೊಡಿತಾರೆ ಅಂತ ಹೆದರಿಕೆಯಿಂದ ಬಾಂಬೆಗೆ ಹೋಗಿದ್ವಿ. ನಮ್ಮದು ಬಾಂಬೆ ಟೀಂ ಅಂತ ಯಾವುದೂ ಇರಲಿಲ್ಲ. ರಾಜೀನಾಮೆ ಕೊಟ್ಟ ಸಂದರ್ಭದಲ್ಲಿ ಸುಧಾಕರ್ಗೆ ಲಿಫ್ಟ್ ನಲ್ಲಿ ಹಾಕೊಂಡು ಹೊಡೆದಿದ್ರು. ಆಮೇಲೆ ಖರ್ಗೆ ಆಫಿಸ್ ಗೆ ಕರೆದುಕೊಂಡು ಹೋಗಿ ಒಳಗೆ ಹಾಕಿದ್ರು. ನಮಗೆ ಏನಾಗುತ್ತೋ ಅನ್ನುವ ಭಯದಲ್ಲಿ ಹೆದರಿಕೆಯಿಂದ ಬಾಂಬೆಗೆ ಹೋದ್ವಿ ಎಂದರು.
ಇನ್ನು ನಮ್ಮ ಟೀಂ ಅಲ್ಲಿ ಒಡಕಿಲ್ಲ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ನಾವು ಬಾಂಬೆ ಟೀಂ ಅಲ್ಲ, ಈಗ ನಾವೆಲ್ಲ ಕರ್ನಾಟಕದಲ್ಲೇ ಇದ್ದೇವೆ. ಮತ್ತೆ ಬಾಂಬೆಗೆ ಹೋಗೋ ಪರಿಸ್ಥಿತಿ ಇಲ್ಲ. ಬಾಂಬೆಗೆ ಹೋಗಿದ್ದ ನಾವೆಲ್ಲ ಸ್ನೇಹಿತರು. ಈಗ ಇನ್ನು 104 ಜನ ಸ್ನೇಹಿತರು ಸಿಕ್ಕಿದ್ದಾರೆ ಎಂದರು.
PublicNext
19/01/2021 06:35 pm