ಹುಬ್ಬಳ್ಳಿ: ಹೆಚ್ ವಿಶ್ವನಾಥ ಅವರು ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಅವರು ನಮ್ಮ ಗುರುಗಳು. ಅವರ ಮಾತು ನಮಗ ಆಶೀರ್ವಾದ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಹೆಚ್ ವಿಶ್ವನಾಥ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಏನು ಮಾತನಾಡಿದ್ರು ನಮಗೆ ಆಶೀರ್ವಾದ. ಆದ್ರೆ ಅವರಿಗೆ ಮಂತ್ರಿ ಸ್ಥಾನ ನೀಡುವ ವಿಚಾರ ಕೋರ್ಟ್ ನಲ್ಲಿದೆ. ಕಾನೂನು ಅಡೆತಡೆ ಇದೆ ಎಂದರು.
ಬಸವನಗೌಡ ಪಾಟೀಲ್ ಯತ್ನಾಳ ಅವರ ಬಗ್ಗೆ ಅಪಾರ ಗೌರವವಿದೆ. ಹಿರಿಯ ನಾಯಕರು ಅವರಿಗೆ ಸ್ಥಾನ ಮಾನಸಿಗಬೇಕು ಎಂಬುದು ಕೂಡ ಆಗ್ರಹವಿದೆ. ಆದರೆ ಸಿಡಿ ಬಗ್ಗೆ ನನಗೆ ಮಾಹಿತಿ ಇಲ್ಲ. ಆದ್ರೆ ಮಾಧ್ಯಮಗಳ ಮುಂದೆ ಪಕ್ಷದ ಆಂತರಿಕ ವಿಚಾರ ಮಾತನಾಡಬಾರದು ಎಂದು ಮನವಿ ಮಾಡುತ್ತೇನೆ ಎಂದರು.
ಸಿಪಿ ಯೋಗೀಶ್ ಅವರ ಮೇಲೆ ಗಂಭೀರ ಆರೋಪಗಳಿದ್ರೆ ವರಿಷ್ಠರ ಗಮನಕ್ಕೆ ತಂದರೆ ಅವರು ಕ್ರಮ ತೆಗೆದುಕೊಳ್ಳುತ್ತಾರೆ. ಇನ್ನು ವಿಜಯೇಂದ್ರ ಅವರು ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂಬುದು ಸುಳ್ಳು. ಸಿಎಂ ಮಗ ಅಂತ ಆರೋಪ ಮಾಡುತ್ತಾರೆ. ನಮ್ಮ ಇಲಾಖೆ ಅಲ್ಲ. ಬೇರೆ ಇಲಾಖೆಗೂ ಅವರು ಕೈ ಹಾಕಿಲ್ಲ ಎಂದರು.
PublicNext
15/01/2021 01:45 pm