ಬೆಂಗಳೂರು: ಸಂಪುಟ ವಿಸ್ತರಣೆ ಬಳಿಕ ಸಚಿವ ಸ್ಥಾನ ಸಿಗದ ಬಿಜೆಪಿ ನಾಯಕರು ಸಿಎಂ ಯಡಿಯೂರಪ್ಪ ಅವರ ವಿರುದ್ಧ ಭರ್ಜರಿ ವಾಗ್ದಾಳಿ ನಡೆಸಿದ್ದಾರೆ. ಸಿಡಿ ಆರೋಪ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ತಾರತಮ್ಯ ನಿವಾರಣೆಗಾಗಿ ಮೂಲ ಬಿಜೆಪಿಗರಿಂದ ಮಾಸ್ಟರ್ ಪ್ಲಾನ್ ರೂಪಿಸಿದೆ ಎಂಬ ಮಾಹಿತಿ ಲಭಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನವರಿ 17ಕ್ಕೆ ಬೆಳಗಾವಿಗೆ ಭೇಟಿ ನೀಡಲಿದ್ದು, ಅನೇಕ ಬಿಜೆಪಿ ಮೂಲ ನಾಯಕರು ದೂರು ನೀಡಲು ಸಿದ್ಧವಾಗಿದ್ದಾರೆ. ಈ ದೂರುಗಳ ಪಟ್ಟಿ ದೊಡ್ಡದಾಗಿದೆ ಎನ್ನಲಾಗಿದೆ.
PublicNext
14/01/2021 09:59 pm