ಉತ್ತರ ಪ್ರದೇಶ : ಪ್ರಾಣಿಗಳು ಮನುಷ್ಯರನ್ನು ನಂಬುವುದು ಬಲು ಅಪರೂಪ. ಆದರೆ ಒಂದೊಂಮ್ಮೆ ಮನುಷ್ಯರನ್ನು ಹಚ್ಚಿಕೊಂಡರೆ ಅವುಗಳು ಆ ವ್ಯಕ್ತಿಯನ್ನು ವಿವಿಧ ರೀತಿಯಲ್ಲಿ ಗುರುತಿಸುತ್ತವೆ.
ಕೆಲವೊಮ್ಮೆ ನಾವುಗಳು ಊಹಿಸಿದ ರೀತಿಯಲ್ಲಿ ಆ ಪ್ರಾಣಿಗಳು ನಮ್ಮನ್ನು ಗುರುತಿಸುತ್ತವೆ. ಸದ್ಯ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಧ್ವನಿ ಕೇಳಿ ಹಸು ಕರುಗಳು ಓಡೋಡಿ ಬರುವ ವಿಡಿಯೋವೊಂದು ವೈರಲ್ ಆಗಿದ್ದು ಆ ವಿಡಿಯೋ ನೋಡಿದವರ ಮನ ಅರಳುತ್ತದೆ.
ಅದೇಷ್ಟೋ ಬಾರಿ ಪ್ರೀತಿಯಿಂದ ಕರೆದರು ಬಾರದ ದನ ಕರುಗಳು ಧ್ವನಿ ಗುರುತಿಸಿ ಬರುತ್ತವೆ ಎಂದರೆ ಆ ವ್ಯಕ್ತಿ ಪ್ರಾಣಿಗಳಿಗೆ ತೋರಿಸಿದ ಪ್ರೀತಿ ಎಂಥಹದ್ದು ಎಂದು ತಿಳಿಯುತ್ತದೆ. ವಿಡಿಯೋದಲ್ಲಿ ನೋಡುವಂತೆ ಯೋಗಿ ಧ್ವನಿ ಕೇಳಿ ಓಡೋಡಿ ಬಂದ ಹಸು ಕರುಗಳಿಗೆ ಅವರು ಬೆಲ್ಲವನ್ನು ತಿನಿಸುವುದನ್ನು ಕಾಣಬಹುದಾಗಿದೆ.
PublicNext
19/08/2022 05:57 pm