ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾಕಾಳಿ ದೇವಾಲಯ ಉದ್ಘಾಟಿಸಿದ ಮೋದಿ; 500 ವರ್ಷಗಳ ಬಳಿಕ ನಡೆಯಿತು ಧ್ವಜಾರೋಹಣ!

ಅಹಮದಾಬಾದ್: ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಪವಗಡ್ ಬೆಟ್ಟದ ಮೇಲಿನ ಪ್ರಸಿದ್ಧ ಮಹಾಕಾಳಿ ದೇವಾಲಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಸಾಂಪ್ರದಾಯಿಕ ಕೇಸರಿ ಧ್ವಜಾರೋಹಣ ಮಾಡಿದ್ದಾರೆ.

ಪವಗಡ್ ಬೆಟ್ಟದ ಮೇಲಿನ ಈ ಸ್ಥಳ ವಿವಾದಕ್ಕೀಡಾಗಿತ್ತು. ಐದು ನೂರು ವರ್ಷಗಳ ಹಿಂದೆ ಸುಲ್ತಾನ್ ಮೊಹ್ಮದ್ ಬೆಗಡ ಎಂಬ ರಾಜ ದಾಳಿ ಮಾಡಿ ದೇವಸ್ಥಾನದ ಶಿಖರ ಮತ್ತು ದೇವಸ್ಥಾನವನ್ನು ಹಾನಿ ಮಾಡಿದ್ದ. ಹನ್ನೊಂದನೆ ಶತಮಾನದಲ್ಲಿ ನಿರ್ಮಿಸಲಾಗಿದ್ದ ಈ ದೇವಸ್ಥಾನ 15ನೇ ಶತಮಾನದಲ್ಲಿ ಹಾನಿಗೆ ಒಳಗಾಗಿದ್ದಲ್ಲದೆ ದರ್ಗಾ ಆಗಿ ಪರಿವರ್ತನೆಯಾಗಿತ್ತು.

ಸೌಹಾರ್ದಯುತ ಮಾತುಕತೆಯ ಮೂಲಕ ದರ್ಗಾವನ್ನು ಸಮೀಪಕ್ಕೆ ಸ್ಥಳಾಂತರಿಸಲು ದರ್ಗಾ ಸಮಿತಿ ಸಮ್ಮತಿಸಿತ್ತು. ದೇವಸ್ಥಾನವನ್ನು ಪುನರುಜ್ಜೀವನಗೊಳಿಸಲಾಗಿದೆ. ಈ ಸ್ಥಳವನ್ನು ಯುನೇಸ್ಕೋ ಸಂಸ್ಥೆ ಪಾರಂಪರಿಕ ತಾಣ ಎಂದು ಘೋಷಣೆ ಮಾಡಿದೆ. ಇಂದು ಸಾಂಪ್ರದಾಯಿಕ ಧ್ವಜಾರೋಹಣ ಮಾಡಿ, ದೇವಸ್ಥಾನ ಉದ್ಘಾಟಿಸಿದ ಮೋದಿ ಅವರು, ದೇವಾಲಯದಲ್ಲಿ ಹಾರಿಸಲಾದ ಧ್ವಜ ನಮ್ಮ ಆಧ್ಯಾತ್ಮಿಕತೆಯ ಸಂಕೇತ ಮಾತ್ರವಲ್ಲ, ಶತಮಾನಗಳು ಕಳೆದರೂ ನಮ್ಮ ನಂಬಿಕೆ ಗಟ್ಟಿಯಾಗಿ ಉಳಿದಿದೆ ಎಂಬುದರ ಸಂಕೇತ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇಲ್ಲಿ ಐದು ಶತಮಾನಗಳ ಕಾಲ ಧ್ವಜಾರೋಹಣ ಮಾಡಿಲ್ಲ, ಸ್ವಾತಂತ್ರ್ಯಾನಂತರವೂ 75 ವರ್ಷಗಳ ಕಾಲವೂ ಧ್ವಜಾರೋಹಣ ಮಾಡಲಾಗಿಲ್ಲ. ಧ್ವಜಾರೋಹಣ ಮಾಡಲು ಶಿಖರದ ಮೇಲೆ ಕಂಬ ಬೇಕು, ಶಿಖರ ಇಲ್ಲದ ಕಾರಣ ಇಷ್ಟು ವರ್ಷ ಧ್ವಜ ಹಾಕಿರಲಿಲ್ಲ ಎಂದರು.

Edited By : Vijay Kumar
PublicNext

PublicNext

20/06/2022 08:44 am

Cinque Terre

37.59 K

Cinque Terre

7

ಸಂಬಂಧಿತ ಸುದ್ದಿ