ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ರಾಮನ ಮುಂದೆ ಶಾಸಕ ರಾಮಣ್ಣನ ಡಿಜೆ ಡ್ಯಾನ್ಸ್ !

ಗದಗ: ರಾಜ್ಯದೆಲ್ಲಡೆ ಇಂದು ಶ್ರೀ ರಾಮನವಮಿ ವೈಭವ ಮುಗಿಲು ಮುಟ್ಟಿತ್ತು. ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಇದು ಇನ್ನೂ ಜೋರ್ ಆಗಿಯೇ ಇತ್ತು. ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಡಿಜೆ ಸಾಂಗ್ ಗೆ ಸಖತ್ ಸ್ಟೆಪ್ ಹಾಕಿದರು. PublicNext ಗೆ ಸಿಕ್ಕ ಈ Exclusive ವೀಡಿಯೋದ ಇನ್ನಷ್ಟು ಡಿಟೈಲ್ಸ್ ಇಲ್ಲಿದೆ. ಬನ್ನಿ, ನೋಡೋಣ.

ಶಿರಹಟ್ಟಿ ಪಟ್ಟಣದಲ್ಲಿ ಶ್ರೀ ರಾಮನವಮಿ ವಿಶೇಷವಾಗಿಯೇ ಇತ್ತು. ಶ್ರೀ ರಾಮನ ಮೂರ್ತಿಯ ಮೆರವಣಿಗೆ ವಾಲ್ಮೀಕಿ ಸರ್ಕಲ್ ನಿಂದ ಪ್ರಮುಖ ಬೀದಿಯಲ್ಲೂ ಸಂಚರಿಸಿತು. ಈ ಒಂದು ಮೆರವಣಿಗೆಯಲ್ಲಿಯೇ ಕ್ಷೇತ್ರದ ಶಾಸಕ ರಾಮಣ್ಣ ಲಮಾಣಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿರೋದು ಹೀಗೆ.

ಶಾಸಕ ರಾಮಣ್ಣಲಮಾಣಿ ಅವರ ಡ್ಯಾನ್ಸ್ ಇಡೀ ಮೆರವಣಿಗೆಯಲ್ಲಿ ಪ್ರಮುಖ ಆಕರ್ಷಣೆಯಂತೇನೂ ಕಾಣಿಸಿತು. ಯುವಕರಿಗೂ Extra ಜೋಶ್ ತುಂಬಿದಂತೆನೂ ಕಂಡು ಬಂದಿರೋದು ನಿಜಕ್ಕೂ ವಿಶೇಷವಾಗಿಯೇ ಇತ್ತು.

-ರೇವನ್ ಪಿ. ಜೇವೂರ್

PublicNext ಶಿರಹಟ್ಟಿ

Edited By : Manjunath H D
PublicNext

PublicNext

10/04/2022 08:59 pm

Cinque Terre

71.27 K

Cinque Terre

0

ಸಂಬಂಧಿತ ಸುದ್ದಿ