ಹಾಸನ: 400 ಹೋತಗಳನ್ನು ಬಲಿಕೊಟ್ಟ ಶಾಸಕ ಪ್ರೀತಂಗೌಡ ಆ ಮೂಲಕ ತಮ್ಮ ಶ್ರೇಯಸ್ಸಿಗಾಗಿ ಬೇಡಿಕೊಂಡಿದ್ದ ಹರಕೆ ತೀರಿಸಿದ್ದಾರೆ. ಹಾಗೂ ಬಂದವರಿಗೆಲ್ಲ ಭರ್ಜರಿ ಬಾಡೂಟ ಹಾಕಿಸಿದ್ದಾರೆ. ಹಾಸನ ತಾಲ್ಲೂಕಿನ ಶಕ್ತಿದೇವತೆ ಪುರದಮ್ಮ ದೇವೆತೆಗೆ ಹರಕೆ ತೀರಿಸಲು ಶಾಸಕ ಪ್ರೀತಂ ಗೌಡ ಇಷ್ಟೆಲ್ಲ ಮಾಡಿದ್ದಾರೆ. ಎಲ್ಲ ಹೋತಗಳನ್ನು ಜಟ್ಕಾ ಕಟ್ ಮೂಲಕ ವಧೆ ಮಾಡಲಾಗಿದೆ.
ಇನ್ನು ಹರಕೆ ತೀರಿಸಲು ದೇವಿಗೆ ವಿಶೇಷ ಅಲಂಕಾರ ಮಾಡಿಸಿ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದ್ದಾರೆ. ಹಾಸನ ಹೊರವಲಯದ ಉದ್ದೂರು ಸಮೀಪ ಬೃಹತ್ ಪೆಂಡಾಲ್ ಹಾಕಿಸಿ ಅಲ್ಲಿ ತಮ್ಮ ಕ್ಷೇತ್ರದ ಜನರಿಗೆ ಬಾಡೂಟಕ್ಕೆ ವ್ಯವಸ್ಥೆ ಮಾಡಿಸಿದ್ದಾರೆ. ಸುಮಾರು 30 ಸಾವಿರಕ್ಕೂ ಅಧಿಕ ಜನರಿಗೆ ಬಾಡೂಟ ನೀಡಲು ತಯಾರಿ ಮಾಡಿದ್ದಾರೆ.
PublicNext
07/04/2022 08:29 am