ನವದೆಹಲಿ: ಮೈಕ್ ಮೂಲಕವೇ ಪ್ರಾರ್ಥನೆ ಸಲ್ಲಿಸಬೇಕೆಂಬ ನಿಯಮ ಇದೆಯಾ? ಕುರಾನ್ ಧರ್ಮ ಗ್ರಂಥದಲ್ಲಿ ಮೈಕ್ ಬಳಸಿ ನಮಾಜ್ ಮಾಡಬೇಕೆಂದು ಉಲ್ಲೇಖ ಇದೆಯಾ? ಎಂದು ಪ್ರಶ್ನಿಸಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ದಿನಕ್ಕೆ ಐದು ಬಾರಿ ಮೈಕ್ ಮೂಲಕ ನಮಾಜ್ ಮಾಡೋದ್ರಿಂದ ಅಕ್ಕಪಕ್ಕದ ಮನೆಯವರಿಗೆ ತೊಂದರೆ ಆಗುತ್ತದೆ ಎಂದಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲರಿಗೂ ಅವರವರ ಧರ್ಮ ದೊಡ್ಡದು, ಪ್ರಾರ್ಥನೆ ಮಾಡಲು ಯಾರು ಕೂಡ ಬೇಡ ಎಂದು ಹೇಳಿಲ್ಲ. ಕುರಾನ್ ಬರೆದಾಗ ಏನು ಮೈಕ್ ಇತ್ತಾ..? ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಎಲ್ಲರು ನಡೆದುಕೊಳ್ಳ ಬೇಕು. ದೇಶದ ಕಾನೂನಿಗೆ ಎಲ್ಲರಿಗೂ ಒಂದೇ ಎಂದಿದ್ದಾರೆ.
PublicNext
05/04/2022 01:47 pm