ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಗವದ್ಗೀತೆ ಯಾವುದೇ ಧರ್ಮಗ್ರಂಥವಲ್ಲ: ಸಂಸದ ಪ್ರತಾಪ್ ಸಿಂಹ

ಮಡಿಕೇರಿ: ಭಗವದ್ಗೀತೆ ಯಾವುದೇ ಧಾರ್ಮಿಕ ಗ್ರಂಥವಲ್ಲ. ಖುರಾನ್ ಮತ್ತು ಬೈಬಲ್ ಧಾರ್ಮಿಕ ಗ್ರಂಥಗಳು. ಭಗವದ್ಗೀತೆಯಲ್ಲಿ ಜೀವನದ ಪಾಠ ಇದೆ, ನೈತಿಕತೆ ಇದೆ. ಅದು ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ಭೋದಿಸುತ್ತದೆ. ಭಗವದ್ಗೀತೆ ಜೀವನದ ಮೌಲ್ಯಗಳನ್ನು ಕಲಿಸುತ್ತದೆ ಹೀಗಾಗಿ ಅದು ಧರ್ಮ ಗ್ರಂಥವಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ .

ಗುಜರಾತ್‌ನಲ್ಲಿ ಭಗವದ್ಗೀತೆ ಪಠ್ಯಕ್ಕೆ ಸೇರಿಸಲಾಗುವುದು ಎಂದು ಘೋಷಣೆಯಾದ ಬೆನ್ನಲ್ಲೇ ರಾಜ್ಯದಲ್ಲಿಯೂ ಈ ಸುದ್ದಿ ಭಾರೀ ಚರ್ಚೆಯಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬೇರೆ ಧರ್ಮ ಗ್ರಂಥಗಳಂತೆ ಭಗವದ್ಗೀತೆಯನ್ನು ಭಾವಿಸಬೇಡಿ. ಇದನ್ನು ಖಡಿತ ಪಠ್ಯದಲ್ಲಿ ಅಳವಡಿಸಲೇಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನು ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಧರ್ಮನೇ ಸುಪ್ರೀಂ ಅಂತ ಹೇಳುತ್ತಾರೆ. ದೇಶಕ್ಕಿಂತ ಧರ್ಮನೇ ಮುಖ್ಯ ಎನ್ನುತ್ತಿದ್ದಾರೆ. ಹಿಜಾಬ್ ವಿಚಾರದಲ್ಲಿ ಇದು ಮತ್ತೊಮ್ಮೆ ಸಾಬೀತಾಗಿದೆ. ಹಿಂದೂ-ಮುಸ್ಲಿಂ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಅವರಿಗೆ ಅಂದೇ ಇದೆಲ್ಲಾ ಗೊತ್ತಾಗಿತ್ತು. ನಮ್ಮ ಜನರಿಗೆ ಇದೆಲ್ಲ ಅರ್ಥವಾಗಿದೆ ಎಂದು ಬಂದ್‌ಗೆ ಕರೆ ನೀಡಿದವರ ಮೇಲೆ ಚಾಟಿ ಬೀಸಿದ್ದಾರೆ.

Edited By : Manjunath H D
PublicNext

PublicNext

19/03/2022 01:04 pm

Cinque Terre

73.92 K

Cinque Terre

19

ಸಂಬಂಧಿತ ಸುದ್ದಿ