ಅಮೇಥಿ: ಹಿಂದೂ ವರ್ಸಸ್ ಹಿಂದುತ್ವವಾದಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈಗ ಅಂತದ್ದೇ ಇನ್ನೊಂದು ಹೇಳಿಕೆ ನೀದ್ದಾರೆ. ಗಂಗಾ ನದಿಯಲ್ಲಿ ಒಬ್ಬರೇ ಸ್ನಾನ ಮಾಡುವವರು ಹಿಂದುತ್ವವಾದಿಗಳು. ಸಾಮೂಹಿಕ ಸ್ನಾನ ಮಾಡುವವರು ಹಿಂದೂಗಳು ಎಂದಿದ್ದಾರೆ.
ಅಮೇಥಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ‘ಹಿಂದುತ್ವವಾದಿ’ ಒಬ್ಬನೇ ಗಂಗೆಯಲ್ಲಿ ಸ್ನಾನ ಮಾಡುತ್ತಾನೆ, ಆದರೆ ಹಿಂದೂ ಕೋಟ್ಯಾಂತರ ಜನರೊಂದಿಗೆ ಸ್ನಾನ ಮಾಡುತ್ತಾನೆ. (ಪ್ರಧಾನಿ) ನರೇಂದ್ರ ಮೋದಿ ಅವರು ಹಿಂದೂ ಎಂದು ಹೇಳುತ್ತಾರೆ, ಆದರೆ ಅವರು ಯಾವಾಗ ಸತ್ಯವನ್ನು ರಕ್ಷಿಸಿದರು? ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದ ಅವರು, ಎಲ್ಲಿ ಮಾಡಿದರು? ಕೋವಿಡ್ ತೊಡೆದು ಹಾಕಲು ತಟ್ಟೆ ಬಡಿಯುವಂತೆ ಅವರು ಜನರನ್ನು ಕೇಳಿದರು. ಹಿಂದೂವೋ ಅಥವಾ ಹಿಂದುವಾದಿಯೋ?’ ಎಂದು ರಾಹುಲ್ ಗಾಂಧಿ ಕೇಳಿದರು.
PublicNext
18/12/2021 10:47 pm