ನವದೆಹಲಿ: ದೇಶದಾದ್ಯಂತ ಸಧ್ಯ ರೈತರು ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆಯ ಹಾದಿ ಹಿಡಿದ್ದಿದ್ದಾರೆ.
ಇದರ ಮಧ್ಯೆ ಕಾಂಗ್ರೇಸ್ ಕಾಂಗ್ರೆಸ್ ಬೆಂಬಲಿಗರು ರಾಹುಲ್ ಗಾಂಧಿ ಹೇಳಿದ್ದನ್ನು ಮೋದಿ ಹೇಳಿದ್ದಂತೆ ಮಾಡಿರುವ ವಿಡಿಯೋವೊಂದನ್ನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಗೊಂದಲ ಸೃಷ್ಠಿಸಿದ್ದಾರೆ.
ಹೌದು 2017ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಪ್ರಚಾರ ಅಭಿಯಾನದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ, ‘ಒಂದು ಕಡೆಯಿಂದ ಆಲೂಗಡ್ಡೆ ಹಾಕಿದರೆ ಇನ್ನೊಂದು ಕಡೆಯಲ್ಲಿ ಚಿನ್ನ ಬರುವಂಥ ಮಷಿನ್ ಹಾಕುತ್ತೇವೆ’ ಎಂಬುದಾಗಿ ಹೇಳಿದ್ದರು.
ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ತುಣುಕೊಂದಕ್ಕೆ, ‘..ಒಂದು ಕಡೆಯಿಂದ ಆಲೂಗಡ್ಡೆ ಹಾಕಿದರೆ ಮತ್ತೊಂದು ಕಡೆಯಲ್ಲಿ ಚಿನ್ನ ಬರುತ್ತದೆ..’ ಎಂದು ಅವರೇ ಹೇಳಿದ ಹಾಗನಿಸುವಂತೆ ಕಾಣಿಸುವ/ಕೇಳಿಸುವ ವಿಡಿಯೋವೊಂದನ್ನು ಕಾಂಗ್ರೆಸ್ ಬೆಂಬಲಿಗರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು.
ಈ ಮೂಲಕ ಹಲವರು, ಮೋದಿಯವರೇ ಮೊದಲು ಆ ಹೇಳಿಕೆ ನೀಡಿದ್ದು ಎಂದು ಬಿಂಬಿಸಲು ಯತ್ನಿಸಿದ್ದರು.
ಈ ಬಗ್ಗೆ ಆಲ್ಟ್ ನ್ಯೂಸ್ ಸಂಸ್ಥೆ ಫ್ಯಾಕ್ಟ್ ಚೆಕ್ ಮಾಡಿ, ಅಸಲಿಯತ್ತು ಏನೆಂಬುದನ್ನು ಬಹಿರಂಗಪಡಿಸಿದೆ.
2019ರ ಏಪ್ರಿಲ್ 27ರಂದು ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಿದ್ದ ಮೋದಿಯವರ ಭಾಷಣದ ತುಣುಕಿಗೆ, ಆಲೂಗಡ್ಡೆ ಹಾಕಿ ಚಿನ್ನ ತೆಗೆಯುವ ಹೇಳಿಕೆ ನೀಡಿದಂತೆ ಭಾಸವಾಗುವಂತೆ ಎಡಿಟ್ ಮಾಡಿ ಗೊಂದಲ ಮೂಡಿಸಲಾಗಿದೆ.
ಪ್ರಧಾನಿ ಮೋದಿ ಆ ರೀತಿ ಹೇಳಿಲ್ಲ ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ ತಿಳಿಸಿದೆ.
PublicNext
26/09/2020 03:28 pm