ಕರಾವಳಿಯಲ್ಲಿ ನಡೆದ ಘಟನೆಗಳು ಇಡೀ ನಮ್ಮ ರಾಜ್ಯಕ್ಕೆ ನೋವು ತರೋ ಸಂಗತಿ. ಮೇಲಿಂದ ಮೇಲೇ ಈ ತರ ಘಟನೆ ನಡೆಯುತ್ತಿವೆ. ಇಂಟೆಲಿಜೆನ್ಸ್ ನವರು ಮೊದಲೇ ಈ ಬಗ್ಗೆ ಮಾಹಿತಿ ಕೊಡಬೇಕು. ಇಂಥ ಘಟನೆಗಳು ಮತ್ತೆ ಆಗಬಾರದು ಎಂದು ಬಿಜೆಪಿ ಎಂಎಲ್ ಸಿ ಬಸವರಾಜ ಹೊರಟ್ಟಿ ಹೇಳಿದ್ರು.
ಇಂದು ಹಾವೇರಿ ಪಟ್ಟಣಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಇಂಟೆಲಿಜೆನ್ಸ್ ನವರು ಸಿಎಂ ಗೆ ಮಾಹಿತಿ ಕೊಡಬೇಕು. ಮುಂದೆ ಏನಾಗುತ್ತೆ ಅಂತ ಮಾಹಿತಿ ಕಲೆಕ್ಟ್ ಮಾಡಿ ಸಿಎಂ ಗೆ ಕೊಡಬೇಕು ಎಂದರು. ನಾನು ಹಿಂದೊಮ್ಮೆ ಇಸ್ರೇಲ್ ಗೆ ಹೋಗಿದ್ದೆ. ಇಸ್ರೇಲ್ ನಲ್ಲಿ ಬೆಳಿಗ್ಗೆ 9 ಕ್ಕೆ ಬಾಂಬ್ ಬ್ಲಾಸ್ಟ್ ಆಯ್ತು, ಸಂಜೆನೇ ಅವರನ್ನು ಹ್ಯಾಂಗ್ ಮಾಡಿದ್ರು. ಇಂಥ ವಿಚಾರದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಯಾರು ತಪ್ಪು ಮಾಡಿದರೂ ಕ್ರಮ ಆಗಬೇಕು. ಆದರೆ ಇಲ್ಲಿ ಶಿಕ್ಷೆ ಆಗಿದ್ದು ಇದುವರೆಗೂ ನಮಗೆ ಗೊತ್ತೇ ಇಲ್ಲ ಎಂದರು.
ಆ ರಿಪೋರ್ಟ್ ಅದು ಇದು ಅಂತ ಅನ್ನೋವಷ್ಟರಲ್ಲಿ ಜನ ಮರೆತು ಬಿಡ್ತಾರೆ. ಯಾವುದೇ ಒತ್ತಡಕ್ಕೆ ಸರ್ಕಾರ ಮಣಿಯಬಾರದು. ಇಂಥ ತಪ್ಪು ಮಾಡಿದ್ದಕ್ಕೆ ಇಂತಹ ಶಿಕ್ಷೆ ಕೊಟ್ಟರು ಅಂತ ಜನರಿಗೆ ಗೊತ್ತಾಗಬೇಕು ಅಂದರು.
ರಾಜಕೀಯಕ್ಕಾಗಿ ಪರಸ್ಪರ ಟೀಕೆ ಮಾಡೋದಕ್ಕಿಂತ ಎಲ್ಲರೂ ರಾಜ್ಯದ ಶಾಂತತೆ ಕಾಪಾಡಬೇಕು. ಎಲ್ಲರೂ ಕೂಡಿಕೊಂಡು ಇದನ್ನು ಮಾಡಬೇಕು ಎಂದರು.
PublicNext
30/07/2022 07:02 pm