ಬೆಂಗಳೂರು: ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಹಾಲಿ ಸಚಿವರೊಬ್ಬರು ನೇರವಾಗಿ ಇನ್ವಾಲ್ವ್ ಆಗಿರೋ ಗುಮಾನಿ ವ್ಯಕ್ತವಾಗಿದೆ.
ಹಳೇ ಮೈಸೂರು ಭಾಗದ ಪ್ರಭಾವಿ ಶಾಸಕರು ಅಂತ ಹೇಳಲಾಗ್ತಿರೋ ಹೈ ಟೆಕ್ ಸಚವರೇ ನೇರವಾಗಿ ಹಗರಣದಲ್ಲಿ ಭಾಗಿಯಾರುವ ಅನುಮಾನ ವ್ಯಕ್ತವಾಗುತ್ತಿದೆ. ಇನ್ನು ಸಿಐಡಿ ವಶಕ್ಕೆ ಪಡೆದಿದ್ದ ಓರ್ವ ಅಭ್ಯರ್ಥಿಯನ್ನ ಸಚಿವರು ತಮ್ಮ ಪ್ರಭಾವ ಬಳಸಿ ಬಿಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವರ ತವರು ಕ್ಷೇತ್ರದಿಂದಲೇ ಹೆಚ್ಚಾಗಿ ಅಕ್ರಮ ನಡೆದಿರುವ ವಾಸನೆ ಎದ್ದಿದ್ದು. ಸರಿಯಾದ ರೀತಿಯಲ್ಲಿ ತನಿಖೆ ನಡೆದರೆ ಮತ್ತಷ್ಟು ಹಗರಣ ಬಯಲಿಗೆ ಬರಲಿದೆ.
PublicNext
02/05/2022 08:37 am