ನವದೆಹಲಿ: ರಾತ್ರೋ ರಾತ್ರಿ ಅಣ್ಣಾಮಲೈ ಅವರಂತೆ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣವರ್ ಅವರು ರಾಜಕೀಯಕ್ಕೆ ಎಂಟ್ರಿ ನೀಡುತ್ತಿದ್ದಾರೆ ಎನ್ನುವ ಸುದ್ದಿ ಭಾರಿ ವೈರಲ್ ಆದ ಬೆನ್ನಲ್ಲೆ ಚನ್ನಣ್ಣವರ್ ಸ್ಪಷ್ಟನೆವೊಂದನ್ನಾ ನೀಡಿದ್ದಾರೆ. ನಾನು ಭರವಸೆ ಎಂಬ ಪುಸ್ತಕವನ್ನು ಬರೆಯುತ್ತಿದ್ದು, ಇದರ ಪ್ರಯುಕ್ತ ಇತ್ತೀಚೆಗೆ ನನ್ನ ರಜೆ ದಿನಗಳಲ್ಲಿ ನನ್ನ ಹಳೆಯ ಸ್ನೇಹಿತರ ಮನೆ ದೇವಸ್ಥಾನ, ಶ್ರೀ ಮಠಗಳಿಗೆ ಭೇಟಿಯಾಗಿ ಮಾಹಿತಿ ಕಲೆಹಾಕುತ್ತಿದ್ದೇನೆ. ಆ ಸಂದರ್ಭದ ವಿವಿಧ ಫೋಟೋಗಳನ್ನು ಉಪಯೋಗಿಸಿಕೊಂಡ ಕೆಲ ಮಾಧ್ಯಮಗಳು ವಿಶೇಷವಾದ ಅರ್ಥವನ್ನು ಕಲ್ಪಸಿ ಬಿತ್ತರಿಸುತ್ತಿವೆ.
ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು, ಅದಕ್ಕೆ ಯಾವುದೇ ವಿಶೇಷತೆ ಮತ್ತು ಅಪಾರ್ಥವನ್ನು ಕಲ್ಪಿಸಬೇಡಿ. ನಾನು ರಾಜಕೀಯ ಸೇರುವುದು ಸತ್ಯಕ್ಕೆ ದೂರವಾದ ಸಂಗತಿ ಎಂಬುದನ್ನು ಈ ಮೂಲಕವಾಗಿ ಸ್ಪಷ್ಟಪಡಿಸುತ್ತೇನೆ ಎಂದು ಹೇಳಿ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಸೂಪರ್ ಕಾಪ್ ಎಂದೇ ಫೇಮಸ್ ಆಗಿರುವ ರವಿ ಡಿ ಚನ್ನಣ್ಣನವರ್ ಅವರನ್ನು ಬಿಜೆಪಿ ಸೆಳೆಯಲು ಮುಂದಾಗಿದೆಯಂತೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.
PublicNext
06/08/2021 04:23 pm