ಚಿತ್ರದುರ್ಗ: ಅಗ್ನಿಪಥ ವಿರೋಧಿ ಪ್ರತಿಭಟನೆ ಹಿಂದೆ ವಿಚ್ಛಿದ್ರಕಾರಿ ಶಕ್ತಿಗಳ ಕೈವಾಡ ಇದೆ ಎಂದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಶಾಂತಿಯುತ ಪ್ರತಿಭಟನೆಗೆ ಬನ್ನಿ ಎಂದು ಕೋರಿದ್ದಾರೆ.
ಚಿತ್ರದುರ್ಗದ ಮುರುಘರಾಜೇಂದ್ರ ಮಠದ ಅನುಭವ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಬಿಜೆಪಿ ಜನಪ್ರತಿನಿಧಿಗಳ ಸಮಾವೇಶ ಉದ್ಘಾ ಟಿಸಿ ಮಾತನಾಡಿದ ಅವರು, “ಅಗ್ನಿ ಪಥ’ ಕ್ರಾಂತಿಕಾರಿ ಯೋಜನೆ ಯಾಗಿದ್ದು, ಇದರಿಂದ ಭಾರತವು ಸೂಪರ್ ಪವರ್ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ಅಗ್ನಿ ಪಥ’ ಅತ್ಯಂತ ವಿಶ್ವಾಸಾರ್ಹ ಯೋಜನೆ. ಆದರೆ ವಿಚ್ಛಿದ್ರಕಾರಿ ಶಕ್ತಿಗಳು ಯುವಕರನ್ನು ದಾರಿ ತಪ್ಪಿಸುತ್ತಿವೆ. ಪಿತೂರಿ ಮಾಡುವವರ ಯೋಜನೆಯನ್ನು ವಿಫಲಗೊಳಿಸಿ “ಅಗ್ನಿಪಥ’ದ ಮಹತ್ವ ಅರ್ಥ ಮಾಡಿಕೊಳ್ಳಿ ಎಂದು ಯುವಜನತೆಗೆ ಕರೆ ನೀಡಿದ್ದಾರೆ. ಅಗ್ನಿವೀರರಾಗಿ ಸೇವೆ ಸಲ್ಲಿಸಿದರೆ ಸರಕಾರಿ ಉದ್ಯೋಗಗಳಲ್ಲಿ ಮೀಸಲು ಸಿಗುತ್ತದೆ. ಯುವಕರು ಗಲಭೆ ಎಬ್ಬಿಸುವುದನ್ನು ಬಿಟ್ಟು ಮಾತುಕತೆಗೆ ಬರಲಿ ಎಂದಿದ್ದಾರೆ.
PublicNext
19/06/2022 03:21 pm