ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಾರ್ಡ್ ವಾರು ಅನುದಾನ ಬಳಸಿ ಶಿಥಿಲ ಕಟ್ಟಡ ತೆರವು : ಪಾಲಿಕೆ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ

ಬೆಂಗಳೂರು: ನಗರದಲ್ಲಿ ಕೆಲ ಶಿಥಿಲ ಕಟ್ಟಡಗಳ ತೆರವು ಕಾರ್ಯ ನೆನೆಗುದಿಗೆ ಬಿದ್ದಿದ್ದು, ಪ್ರಕರಣಗಳು ಕೋರ್ಟ್ ನಲ್ಲಿ ಇತ್ಯರ್ಥವಾಗಬೇಕಿದೆ. ವಾರ್ಡ್ ವಾರು ಇರುವ ಅನುದಾನ ಬಳಕೆ ಮಾಡಿಕೊಂಡು ತೆರವು ಮಾಡಬಹುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ತಿಳಿಸಿದರು.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ತ್ರಿಲೋಕ್ ಚಂದ್ರ ಮಾತನಾಡಿ ಶಿಥಿಲ ಕಟ್ಟಡಗಳ ಕುರಿತು ವಾರ್ಡ್ ನಲ್ಲಿರುವ ಎಇಇ ಗಳಿಗೆ ನೊಟೀಸ್ ನೀಡುವ ಜವಾಬ್ದಾರಿ ನೀಡಲಾಗಿದೆ. ಶೀಘ್ರದಲ್ಲಿಯೇ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಇನ್ನು ನಗರದಲ್ಲಿ 11,454 ಗುಂಡಿಗಳು ಪತ್ತೆಯಾಗಿವೆ. 503 ಶಿಥಿಲ ಕಟ್ಟಡಗಳನ್ನು ಗುರುತಿಸಲಾಗಿದೆ. ಈ ಪೈಕಿ‌ 13 ಕಟ್ಟಡಗಳನ್ನು ಮಾತ್ರ ತೆರವು ಮಾಡಲಾಗಿದೆ ಎಂದು ವಿವರಿಸಿದರು. ಕೋವಿಡ್ ಸಂಬಂಧ ಬಿಬಿಎಂಪಿ ಈಗಲೂ ಎಚ್ಚರಿಕೆ ಹೊಂದಿದ್ದು, ದಿನನಿತ್ಯ 16 ಸಾವಿರ ಪರೀಕ್ಷೆ ನಡೆಯುತ್ತಿದೆ ಎಂದರು.

ಹಾಗೇ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಯ ಜೊತೆ ನಿರಂತರವಾಗಿ ಶಾಲೆಗಳಿಗೆ ಭೇಟಿ ಕೊಡಲಾಗುತ್ತಿದೆ. ಈ ನಡುವೆ 15 ರಿಂದ 17 ನೇ ವಯಸ್ಸಿನ ಮಕ್ಕಳಿಗೆ ಲಸಿಕೆ ಮುಗಿದಿದೆ. ಮತ್ತೊಂದೆಡೆ‌ ಕಳೆದ 15 ದಿನಗಳಲ್ಲಿ 80 ಡೆಂಘೀ ಪ್ರಕರಣ ಪತ್ತೆಯಾಗಿದೆ. ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿಲ್ಲ‌ ಎಂದು ತಿಳಿಸಿದರು.

Edited By : Somashekar
PublicNext

PublicNext

27/05/2022 04:30 pm

Cinque Terre

64.13 K

Cinque Terre

0

ಸಂಬಂಧಿತ ಸುದ್ದಿ