ಮೈಸೂರು: ಉಡುಪಿಯ ಕಾಲೇಜೊಂದರಲ್ಲಿ ಶುರುವಾದ ಹಿಜಾಬ್ ವಿವಾದ ಇಂದು ರಾಜ್ಯದ್ಯಲ್ಲೇಡೆ ಸಂಚಲ ಸೃಷ್ಟಿಸಿದೆ.
ಸದ್ಯ ವಿದ್ಯಾರ್ಥಿಗಳನ್ನು ಮೀರಿ ರಾಜಕೀಯ ತಿರುವುಪಡೆಯುತ್ತಿರುವ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ ಹಿಜಾಬ್ ಬೆಂಬಲಿಸುವವರು ಪಾಕಿಸ್ತಾನಕ್ಕೆ ಹೋಗಿ ಎಂದು ಕಿಡಿಕಾರಿದ್ದಾರೆ.
‘ರಾಜ್ಯದಲ್ಲಿರುವ ಎಲ್ಲ ಮದರಸಾ ಮತ್ತು ಉರ್ದು ಶಾಲೆಗಳನ್ನು ಬಂದ್ ಮಾಡಬೇಕು. ಕಲಿಯುವುದಾದರೆ ಕನ್ನಡ ಕಲಿಯಲಿ, ಭಾರತದ ಸಂಸ್ಕೃತಿಯನ್ನು ಒಪ್ಪಿಕೊಂಡು ಜೀವಿಸಲಿ. ಆದಕ್ಕೆ ತಯಾರಿಲ್ಲ ಎಂದಾದರೆ ಪಾಕಿಸ್ತಾನಕ್ಕೆ ಹೋಗಲಿ’ ಎಂದು ಗುಡುಗಿದ್ದಾರೆ.
ಹಿಜಾಬ್ ಧರಿಸಿಕೊಂಡು ಬರುವವರನ್ನು ಶಾಲೆಯಿಂದ ಹೊರಗೆ ಹಾಕಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿದರು.
‘ಇಂದು ಹಿಜಾಬ್ ಧರಿಸಲು ಅವಕಾಶ ನೀಡಿ ಎನ್ನುವವರು, ನಾಳೆ ಶಾಲೆಯಲ್ಲಿ ಮಸೀದಿ ಕಟ್ಟಬೇಕು ಎನ್ನುತ್ತಾರೆ. ಅಂತವರಿಗೆ ಬೆಂಬಲ ಕೊಡುವವರು ನಿಜವಾದ ದೇಶದ್ರೋಹಿಗಳು. ಇಂತಹ ಚಟುವಟಿಕೆಗಳನ್ನು ಯಾವುದೇ ಮುಲಾಜಿಲ್ಲದೆ ಹತ್ತಿಕ್ಕಬೇಕು. ರಾಜ್ಯದಲ್ಲಿ ಅಶಾಂತಿ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ. ಇದರ ಹಿಂದೆ ದೇಶವಿರೋಧಿ ಶಕ್ತಿಗಳ ಕೈವಾಡವಿದೆ’ ಎಂದು ಆರೋಪಿಸಿದರು.
PublicNext
05/02/2022 02:03 pm