ಬೆಂಗಳೂರು: ಅಕ್ರಮ ಹಣ ಮತ್ತು ಆಸ್ತಿ ವಿಷಯಕ್ಕೆ ಸಂಬಂಧಿದಂತೆ ನಿನ್ನೆ ಸೋಮವಾರ ಡಿಕೆ ಬ್ರದರ್ಸ್ ಗೆ ಸಿಬಿಐ ಶಾಕ್ ಕೊಟ್ಟಿತ್ತು.
ಇನ್ನೂ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಬುಲಾವ್ ನೀಡಿದ್ದಾರೆ.
ಏಕಕಾಲದಲ್ಲಿ 14 ಕಡೆ ದಾಳಿ ನಡೆಸಿದ ಅಧಿಕಾರಿಗಳು 57 ಲಕ್ಷ ಹಣ ಹಾಗೂ ಕೆಲವೊಂದು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.
ದಾಳಿ ಮುಕ್ತಾಯವಾದ ಬಳಿಕ ಸಮನ್ಸ್ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.
ಹೀಗಾಗಿ ಕನಕಪುರ ಬಂಡೆ ಇಂದು ಬೆಳಗ್ಗೆ 11 ಗಂಟೆಗೆ ಡಿಕೆಶಿ ವಿಚಾರಣೆಗೆ ಹಾಜರಾಗುವ ಸಾಧ್ಯೆತಗಳು ಹೆಚ್ಚಾಗಿದೆ.
PublicNext
06/10/2020 08:55 am