ಲಂಡನ್: ಬ್ರಿಟನ್ ದೇಶದ ಮುಂದಿನ ಪ್ರಧಾನಿ ಯಾರ್ ಆಗ್ತಾರೆ. ಈ ಒಂದು ಕುತೂಹಲ ಈಗಲೇ ಇದೆ. ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ ಕೂಡ ಈ ರೇಸ್ ನಲ್ಲಿರೋದ್ರಿಂದ ಕರ್ನಾಟಕದಲ್ಲೂ ಈ ಬಗ್ಗೆ ಒಂದು ಸಣ್ಣ ಕುತೂಹಲ ಇದ್ದೇ ಇದೆ.
ಹೌದು. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಈ ಸ್ಥಾನಕ್ಕೇನೆ ನೂತನ ನಾಯಕನ ಆಯ್ಕೆ ಇದೇ ಸೆಪ್ಟೆಂಬರ್-5 ರಂದು ಘೋಷಿಸಲಾಗುತ್ತಿದ ಎಂದು ಕನ್ಸರ್ವೇಟಿವ್ ಪಕ್ಷದ ಮುಖ್ಯಸ್ಥ ಗ್ರಹಾಂ ಬ್ರಾಡಿ ಈಗ ತಿಳಿಸಿದ್ದಾರೆ.
ಪಕ್ಷದ ನಾಯಕತ್ವ ಚುನಾವಣೆಯು ಪ್ರಧಾನಿ ಅಭ್ಯರ್ಥಿಯನ್ನು ನಿರ್ಧರಿಸಲಿದೆ. ಇನ್ನು ನಾಮನಿರ್ದೇಶನ ಮಾಡುವ ಅಭ್ಯರ್ಥಿಗಳು 20 ಸದಸ್ಯರ ಬೆಂಬಲ ಹೊಂದಿರಲೇಬೇಕು. ಪಕ್ಷದ ಸಂಸದರ ಮೊದಲ ಸುತ್ತಿನ ಮತದಾನ ಬುಧವಾರ ನಡೆಯಲಿದೆ. ಅಭ್ಯರ್ಥಿಗಳು ಗುರುವಾರ ನಡೆಯುವ ಎರಡನೇ ಸುತ್ತನ್ನ ಪ್ರವೇಶಿಸಲು 30 ಮತಗಳನ್ನ ಪಡೆಯಬೇಕಾಗುತ್ತದೆ ಎಂದು ಪಕ್ಷದ ಸಭೆಯಲ್ಲಿ ಹೇಳಲಾಗಿದೆ.
PublicNext
12/07/2022 11:05 am