ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾಷಿಂಗ್ಟನ್ ನಲ್ಲಿ ಎಮರ್ಜೆನ್ಸಿ ಘೋಷಿಸಿದ ಟ್ರಂಪ್!

ವಾಷಿಂಗ್ಟನ್ : ಅಮೆರಿಕಾದ ಕರಾಳ ದಿನವೆಂದು ಕರೆಯಲ್ಪಡುವ ಟ್ರಂಪ್ ಬೆಂಬಲಿಗರ ಹಿಂಸಾಚಾರದ ಕೃತ್ಯ ಜಗತ್ತಿನ ಗಮನ ಸೆಳೆದಿದೆ.

ಸದ್ಯ ಅಮೆರಿಕದ ಅಧ್ಯಕ್ಷರಾಗಿ ಜೋ ಬಿಡೆನ್ ಜನವರಿ 20ರಂದು ಅಧಿಕಾರ ಸ್ವೀಕರಿಸಲಿರುವ ಬೆನ್ನಲ್ಲೇ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

ಜನವರಿ 24ರ ವರೆಗೆ ವಾಷಿಂಗ್ಟನ್ ಡಿ.ಸಿಯಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ.

ಜೋ ಬಿಡೆನ್ ಅಧಿಕಾರ ಸ್ವೀಕಾರದ ವೇಳೆ ಟ್ರಂಪ್ ಬೆಂಬಲಿಗರಿಂದ ಭಾರೀ ಹಿಂಸಾಚಾರ ನಡೆಯುವ ಸಾಧ್ಯತೆ ಇರುವುದರಿಂದ ಎರಡು ವಾರಗಳ ಕಾಲ ತುರ್ತು ಪರಿಸ್ಥಿತಿ ಇರಲಿದೆ ಎಂದು ಶ್ವೇತ ಭವನ ತಿಳಿಸಿದೆ.

ಇನ್ನು ವಾಷಿಂಗ್ಟನ್ ನ ತುರ್ತು ಪರಿಸ್ಥಿತಿ ವೇಳೆ ಜನರಿಗೆ ತೊಂದರೆಯಾಗದಂತೆ, ಆಸ್ತಿಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಆಂತರಿಕ ಭದ್ರತಾ ವಿಭಾಗ ಹಾಗೂ ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿಗೆ (ಎಫ್ ಇಎಂಎ) ಸೂಚನೆ ನೀಡಲಾಗಿದೆ.

ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್ ಅಮೆರಿಕದ 59ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದನ್ನು ತಡೆಯಲು ಟ್ರಂಪ್ ಬೆಂಬಲಿಗರು ಮುಂದಾಗಲಿದ್ದಾರೆ ಎನ್ನಲಾಗಿದೆ.

ವಾಷಿಂಗ್ಟನ್ ಸೇರಿದಂತೆ ದೇಶದ 50 ರಾಜ್ಯಗಳ ರಾಜಧಾನಿಗಳಲ್ಲಿ ಶಸ್ತ್ರಸಜ್ಜಿತ ಜನರಿಂದ ಭಾರೀ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ ಎಂದು ಫೆಡರಲ್ ಬ್ಯುರೋ ಆಫ್ ಇನ್ ವೆಸ್ಟಿಗೇಷನ್ (ಎಫ್ ಬಿಐ) ಎಚ್ಚರಿಕೆ ನೀಡಿದೆ.

ಜೋ ಬಿಡೆನ್ ಹಾಗೂ ಕಮಲಾ ಹ್ಯಾರಿಸ್ ಅವರನ್ನು ಟಾರ್ಗೆಟ್ ಮಾಡುವ ಮೂಲಕ ದಂಗೆ ಏಳುವ ಸಾಧ್ಯತೆ ಇದೆ.ಈ ಹಿನ್ನೆಲೆ ತುರ್ತು ಪರಿಸ್ಥಿತಿ ಕ್ರಮ ಕೈಗೊಳ್ಳಲಾಗಿದೆ ಎಂದು ಶ್ವೇತಭವನ ಸ್ಪಷ್ಟನೆ ನೀಡಿದೆ.

Edited By : Nirmala Aralikatti
PublicNext

PublicNext

13/01/2021 07:37 am

Cinque Terre

99.59 K

Cinque Terre

9

ಸಂಬಂಧಿತ ಸುದ್ದಿ