ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು:ಅಗ್ರಹಾರ ಕೆರೆ ಏರಿಗೆ ಭೇಟಿ ನೀಡಿದ ಇಂಜಿನಿಯರ್‌ಗಳು!

ವರದಿ: ರಾಘವೇಂದ್ರ ದಾಸರಹಳ್ಳಿ

ಕೊರಟಗೆರೆ: ಪಟ್ಟಣದ ಜೆಟ್ಟಿ ಅಗ್ರಹಾರ ಕೆರೆ ಏರಿ ಬಿರುಕು ಬಂದಿದ್ದು, ಅದನ್ನು ಸರಿಪಡಿಸುವ ಗೋಜಿಗೆ ಯಾರು ಹೋಗಿಲ್ಲ. ಹಾಗೂ ಸಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲಾ ಎಂಬುದಾಗಿ ಕೆರೆ ಏರಿ ಬಿರುಕು ಬಿಟ್ಟಿದ್ದ ವರದಿಯನ್ನು ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿ ಬಿತ್ತರಿಸಿತ್ತು.

ವರದಿ ಮಾಡಿ ಸುಮ್ಮನಿರುವುದಲ್ಲ ಪಬ್ಲಿಕ್ ನೆಕ್ಸ್ಟ್ ಕೆಲಸ, ವರದಿಗೆ ತಕ್ಕ ಫಲಶ್ರುತಿಯನ್ನು ಕೊಡುವುದೇ ನಮ್ಮ ಮುಖ್ಯ ಉದ್ದೇಶ. ರೈತರಿಗೆ, ಸಾರ್ವಜನಿಕರಿಗೆ ಅನ್ಯಾಯ ನಡೆಯುತ್ತಿದ್ದರು ನೋಡಿ ಸುಮ್ಮನೆ ಕೂರುವುದಲ್ಲ ನಾವು.

ಪಬ್ಲಿಕ್ ನ್ಯೂಸ್ ನಲ್ಲಿ ಸುದ್ದಿಯು ಪ್ರಸಾರವಾದ ಕೂಡಲೇ ಎಚ್ಚೆತ್ತ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳು ಇಂದು ಕೆರೆ ಏರಿಗೆ ಬಂದು ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.

ಕೆರೆ ಏರಿ ಒಡೆಯುವ ಆತಂಕದಲ್ಲಿದ್ದ ಗ್ರಾಮಸ್ಥರಿಗೆ ನೆಮ್ಮದಿಯಿಂದ ಇರುವಂತೆ ಪಬ್ಲಿಕ್ ನೆಕ್ಸ್ಟ್ ಫಲಶ್ರುತಿಯನ್ನು ಕೊಟ್ಟಿದೆ.

ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆರೆ ಏರಿ ಬಿರುಕು ಬಿಟ್ಟಿರುವುದು ಹಾಗೂ ಕೆರೆಯ ಸುತ್ತಲೂ ಬೆಳೆದಿರುವ ಗಿಡ ಮರಗಳನ್ನು ನೋಡಿದ್ದಾರೆ, ಬೆಳೆದಿರುವಂತಹ ಗಿಡಮರಗಳನ್ನು, ಬಂಟ್ ಗಳನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದಾರೆ

ಸಣ್ಣ ನೀರಾವರಿ ಇಲಾಖೆಯು ಕೆರೆ ಪುನಶ್ಚೇತನಕ್ಕೆ 25 ಲಕ್ಷ ಹಣ ಬಿಡುಗಡೆ ಮಾಡಿರುತ್ತದೆ. ಹಾಗೂ ಇದಕ್ಕೆ ಸಂಬಂಧಿಸಿದಂತೆ 25 ಲಕ್ಷ ಟೆಂಡರ್ ಕರೆದಿರುವ ಅಧಿಕಾರಿಗಳು ಶೀಘ್ರದಲ್ಲೇ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಇಂಜಿನಿಯರ್‌ಗಳು ಕೆರೆ ಹತ್ತಿರ ಬರುತ್ತಿದ್ದಂತೆ ಸ್ಥಳೀಯರು ಹಾಗೂ ರೈತರು ಆಕ್ರೋಶಭರಿತರಾಗಿದ್ದರು. ನಂತರ ಅಧಿಕಾರಿಗಳು ಅವರ ಮನವೊಲಿಸಿ ಶೀಘ್ರದಲ್ಲೇ ಸರಿಪಡಿಸುತ್ತೇವೆ ಎಂದು ಸಮಾಧಾನಪಡಿಸಿದರು.

Edited By : Nagesh Gaonkar
PublicNext

PublicNext

22/07/2022 07:58 am

Cinque Terre

104.17 K

Cinque Terre

0

ಸಂಬಂಧಿತ ಸುದ್ದಿ