ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದ ಇಟ್ಟಿಕೆರೆ ಗ್ರಾಮ ಮಳೆ ನೀರಿನಿಂದ ಆವೃತವಾಗಿದೆ. ಶಾಸಕ ರಾಮಣ್ಣ ಲಮಾಣಿ ಸ್ಥಳ ಪರಿಶೀಲಿಸಲು ಬಂದಿದ್ದಾರೆ. ಇದೇ ವೇಳೆ ಸ್ಥಳೀಯರು ಶಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಟ್ಟಿಕೇರೆಯ ಸುತ್ತಮುತ್ತ ಅನೇಕ ಮನೆಗಳಿವೆ. ಹಾಗೂ ಸಾಯಿಬಾಬಾ ಮಂದಿರ ಇದೆ. ಎಲ್ಲರ ಮನೆಗೆ ನೀರು ನುಗ್ಗಿದೆ. ಇದನ್ನು ಹೊರ ಹಾಕಿಸಿ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
ನಿರಂತರ ಮಳೆಯಿಂದ ರಸ್ತೆಗಳು ಹಾಳಾಗಿವೆ. ಲಕ್ಷ್ಮೇಶ್ವರ ಪಟ್ಟಣದಲ್ಲೂ ಬಹುತೇಕ ರಸ್ತೆಗಳು ಹಾಳಾಗಿ ಹೋಗಿದ್ದು ಅವುಗಳನ್ನು ಸರಿಪಡಿಸಿ ಎಂದು ಜನರು ಶಾಸಕ ರಾಮಣ್ಣ ಲಮಾಣಿಗೆ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಶಾಸಕ ರಾಮಣ್ಣ ರಸ್ತೆಗಳನ್ನು ತಾತ್ಕಾಲಿಕವಾಗಿ ಗುಂಡಿ ಮುಚ್ಚಲು ಹೇಳಲಾಗಿದೆ. ಆದಷ್ಟು ಬೇಗ ಸರಕಾರದಿಂದ ಅನುದಾನ ತಂದು ರಸ್ತೆ ನಿರ್ಮಿಸುತ್ತೇವೆ ಎಂದು ಜನರನ್ನು ಸಮಾಧಾನಪಡಿಸಿದರು.
PublicNext
02/09/2022 05:11 pm