ನವದೆಹಲಿ: ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿದ್ದೇ ತಡ, ದೆಹಲಿ ಮಾಡೆಲ್ ನೋಡಿ ಬರಲು ಅಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು, ಸ್ಥಳೀಯ ಸರ್ಕಾರಗಳ ಪ್ರತಿನಿಧಿಗಳು ದೆಹಲಿಗೆ ತಂಡೋಪ ತಂಡವಾಗಿ ಹೋಗುತ್ತಿದ್ದಾರೆ.
ಈಗ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ದೆಹಲಿ ಮಾದರಿ ನೋಡಿ ಬರಲು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಚಿರಾಗ್ ಎನ್‌ಕ್ಲೇವ್ ಪ್ರದೇಶದ ಸರ್ಕಾರಿ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾರೆ. ಹಾಗೂ ಅಲ್ಲಿನ ಮಕ್ಕಳೊಂದಿಗೆ ತಾವೂ ಮಕ್ಕಳಂತೆ ಬೆಂಚ್ ಮೇಲೆ ಕುಳಿತಿದ್ದಾರೆ. ಇದರ ವಿಡಿಯೋ ಟ್ವೀಟ್ ಮಾಡಿರುವ ದೆಹಲಿ ಆಮ್ ಆದ್ಮಿ ಪಕ್ಷ ಈ ಸಂದರ್ಭವನ್ನು 'ಮೈಂಡ್‌ಫುಲ್‌ನೆಸ್ ಕ್ಲಾಸ್' ಎಂದು ಬಣ್ಣಿಸಿದೆ.
PublicNext
25/04/2022 04:52 pm