ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೆದ್ದ ಗಂಡನ ಹೊತ್ತು ಮೆರೆದಳು: ಗೆಲುವಿನ ಖುಷಿ ಊರಿಗೆಲ್ಲ ಹಂಚಿದಳು

ಪುಣೆ: ಸಾರ್ವತ್ರಿಕ ಚುನಾವಣೆಗಿಂತಲೂ ಗ್ರಾಮ ಪಂಚಾಯತಿ ಚುನಾವಣೆ ಗೆಲ್ಲುವುದು ರಣಾಂಗಣದಲ್ಲಿ ಹೋರಾಡಿ ಗೆದ್ದು ಬಂದಷ್ಟೇ ಮಹತ್ವದ್ದಾಗಿರುತ್ತದೆ. ಇಲ್ಲೊಬ್ಬ ಅಭ್ಯರ್ಥಿ ಚುನಾವಣೆ ಗೆಲ್ಲುತ್ತಿದ್ದಂತೆ ಹೆಗಲ ಮೇಲೆ ಎತ್ತುಕೊಂಡು ಮೆರವಣಿಗೆ ನಡೆಸಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ವಿಶೇಷ ಇದೆ.

ಪಂಚಾಯತಿ ಚುನಾವಣೆಯಲ್ಲಿ ಗೆದ್ದದ್ದು ಗಂಡ. ಹೀಗೆ ಹೆಗಲ ಮೇಲೆ ಪತಿಯನ್ನೇ ಹೊತ್ತುಕೊಂಡ ಪತ್ನಿ..ಗ್ರಾಮದಲ್ಲಿ ನಡೆಯುತ್ತಿದೆ ಭಾರಿ ವಿಜಯ ಯಾತ್ರೆ...ಹೌದು, ಈ ದೃಶ್ಯಗಳು ಕಂಡು ಬಂದಿದ್ದು, ಮಹಾರಾಷ್ಟ್ರ ರಾಜ್ಯ ಪುಣೆಯ ಪಾಳು ಗ್ರಾಮದ್ದು. ಪತಿ ಸಂತೋಷ ಗುರವ ಈ ಬಾರಿ ಪಾಳು ಗ್ರಾಮ ಪಂಚಾಯತಿ ಚುನಾವಣೆಯ ಅಖಾಡಕ್ಕೆ ಇಳಿದಿದ್ದರು. 221 ಮತಗಳನ್ನ ಪಡೆದು ಚುನಾವಣೆಯಲ್ಲಿ ಗೆದ್ದಿದ್ದಾನೆ. ಇಂದು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪತ್ನಿ ರೇಣುಕಾ ತನ್ನ ಪತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ನಡೆಸಿದ್ದಾಳೆ.

ಚುನಾವಣೆಯಲ್ಲಿ ಗೆದ್ದ ಬಳಿಕ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನ ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆ ಮಾಡುವುದನ್ನ ನಾವು ನೀವೆಲ್ಲ ನೋಡಿದ್ದೇವೆ. ಆದರೇ ಗಂಡನ ಗೆಲುವಿಗೆ ಹೆಂಡತಿಯೇ ಗಂಡನನ್ನ ಹೆಗಲ ಮೇಲೆ ಹೊತ್ತುಕೊಂಡಿದ್ದು ಗ್ರಾಮಸ್ಥರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತ್ತು.

Edited By : Nagaraj Tulugeri
PublicNext

PublicNext

19/01/2021 01:21 pm

Cinque Terre

100.48 K

Cinque Terre

25

ಸಂಬಂಧಿತ ಸುದ್ದಿ