ಬೆಂಗಳೂರು : ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ, ಜಿಮ್ ಗಳಲ್ಲಿ ಅಕ್ರಮ ಪ್ರೋಟೀನ್ ಪೌಡರ್ ಬಳಸಲಾಗುತ್ತದೆ ಎಂದು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಪ್ರೋಟೀನ್ ಪೌಡರ್ ಮಾರಾಟದ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದೇ ವೇಳೆ, ಆರೋಗ್ಯ ಸಚಿವ ಕೆ ಸುಧಾಕರ್ ಮಾತನಾಡಿ, ಆಹಾರ ಸುರಕ್ಷತೆ ವಿಭಾಗದಿಂದ ವಿಶೇಷ ಅಭಿಯಾನ ನಡೆಸಿ ಅನಧಿಕೃತವಾಗಿ ಪ್ರೋಟೀನ್ ಪೌಡರ್ ಮಾರಾಟ ಮಾಡುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು. ಕೆಲವು ಪ್ರೋಟೀನ್ ಪೌಡರ್ ಗಳಲ್ಲೂ ಒಳ್ಳೆಯ ಅಂಶ ಇದೆ ಎಂದರು.
ರಾಜ್ಯದ ಹಲವು ಜಿಮ್ ನಲ್ಲಿ ಬಳಸುವ ಪ್ರೋಟೀನ್ ಪೌಡರ್ ಅನ್ನು ಬ್ಯಾನ್ ಮಾಡುವಂತೆ ಸದನದಲ್ಲಿ ಒತ್ತಾಯ ಮಾಡಲಾಗಿದೆ.
ಪ್ರೋಟೀನ್ ಪೌಡರ್ ಬಗ್ಗೆ ಆಗುವ ಪರಿಣಾಮದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ನಿಗ್ರಹ ಮಾಡಬೇಕು ಅಂತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಸರ್ಕಾರಕ್ಕೆ ಮನವಿ ಮಾಡಿದರು.
PublicNext
21/09/2022 01:31 pm