ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾರಾಂತ್ಯ ಕರ್ಫ್ಯೂಗೆ ಸಿದ್ದರಾಮಯ್ಯ ವಿರೋಧ: ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಯಾಗಲಿ

ಮಂಡ್ಯ: ವೀಕೆಂಡ್ ಕರ್ಫ್ಯೂ ಮಾಡೋದ್ರಿಂದ ಕೊರೊನಾ ಹತೋಟಿ ಸಾಧ್ಯ ಇಲ್ಲ. ಕೂಡಲೇ ರಾಜ್ಯ ಸರ್ಕಾರ ವಾರಾಂತ್ಯದ ಕರ್ಪ್ಯೂ ವಾಪಸ್ ಪಡೆಯಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾರಾಂತ್ಯದ ಕರ್ಫ್ಯೂ ಜನರ ಮೇಲೆ ಅನಗತ್ಯ ಹೇರಿಕೆ. ಇದರಿಂದ ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಬೀಳುತ್ತದೆ. ಹೀಗಾಗಿ ವಾರಾಂತ್ಯದ ಕರ್ಫ್ಯೂ ಕೈ ಬಿಟ್ಟು ನಿಯಮಗಳನ್ನು ಇನ್ನಷ್ಟು ನಿಟ್ಟಾಗಿ ಜಾರಿ ಮಾಡಬೇಕು ಹಾಗೂ ಲಸಿಕಾಕರಣವನ್ನು ಹೆಚ್ಚು ಮಾಡಬೇಕು ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Edited By : Nagaraj Tulugeri
PublicNext

PublicNext

20/01/2022 10:53 pm

Cinque Terre

75.03 K

Cinque Terre

3

ಸಂಬಂಧಿತ ಸುದ್ದಿ