ಜೈಪುರ: ರಕ್ಕಸ ಕೊರೊನಾ ಜನರನ್ನು ಭಕ್ಷಿಸುವುದನ್ನು ಇನ್ನು ನಿಲ್ಲಿಸಿಲ್ಲ.
ಕೊರೊನಾ ಅಟ್ಟಹಾಸಕ್ಕೆ ನಲುಗದವರಿಲ್ಲ ಯಾವ ತಾರತಮ್ಯ ಮಾಡದ ಕೋವಿಡ್ ಸದ್ಯ ರಾಜಸ್ಥಾನದ ಬಿಜೆಪಿ ನಾಯಕಿ ಮತ್ತು ಶಾಸಕಿ ಕಿರಣ್ ಮಹೇಶ್ವರಿ ಅವರನ್ನು ಬಲಿ ಪಡೆದಿದೆ.
ಕೋವಿಡ್ ಪಾಸಿಟಿವ್ ಬಂದ ಬಳಿಕ ಅವರು ಹರ್ಯಾಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ರಾಜಸ್ಥಾನದ ರಾಜ್ ಸಮಂಧ್ ಕ್ಷೇತ್ರದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ಸೋಮವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಗುರುಗಾಂವ್ ಸಮೀಪದ ಮೇದಾಂತ ಆಸ್ಪತ್ರೆಗೆ ಅವರನ್ನು ದಾಖಲು ಮಾಡಲಾಗಿತ್ತು.
ಕಿರಣ್ ಮಹೇಶ್ವರಿ 2018ರ ಚುನಾವಣೆಯಲ್ಲಿ 89,709 ಮತಗಳನ್ನು ಪಡೆದು ಕಾಂಗ್ರೆಸ್ ನ ನಾರಾಯಣ್ ಸಿಂಗ್ ಅವರನ್ನು ಸೋಲಿಸಿ ವಿಧಾನಸಭೆ ಪ್ರವೇಶಿಸಿದ್ದರು.
ಕೆಲವು ದಿನಗಳ ಹಿಂದೆ ಅವರಿಗೆ ಕೋವಿಡ್ ಸೋಂಕು ತಗುಲಿತ್ತು.
PublicNext
30/11/2020 07:47 am