ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಹೊಸ ವರ್ಷದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ಯಾವುದೇ ಪರೀಕ್ಷೆಗೂ ಶುಲ್ಕವಿಲ್ಲ'

ಮೈಸೂರು: ಹೊಸ ವರ್ಷದ ಮೊದಲ ದಿನದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಹಾಗೂ ಯಾವುದೇ ಪರೀಕ್ಷೆಗೂ ಶುಲ್ಕವಿಲ್ಲ ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾಲಯದ ಡೀನ್ ಕಚೇರಿಯಲ್ಲಿ ಮಾತನಾಡಿದ ಸಚಿವರು, 'ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯವರೆಗೆ ಎಲ್ಲ ಕಡೆ ಪರೀಕ್ಷೆಗಳನ್ನು ಒಂದು ರೂ. ಶುಲ್ಕ ಪಡೆಯದೇ ಉಚಿತವಾಗಿ ಮಾಡಲಾಗುತ್ತದೆ. ಈ ವ್ಯವಸ್ಥೆಯನ್ನು ಜನವರಿ 1ರಂದು ಘೋಷಿಸಲಾಗುವುದು' ಎಂದು ಮಹತ್ವದ ವಿಚಾರವನ್ನು ತಿಳಿಸಿದರು.

ಸರಕಾರಿ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಸೇರಿ ಕೆಲ ಪರೀಕ್ಷೆಗಳನ್ನು ಮಾಡದೆ ಖಾಸಗಿ ಲ್ಯಾಬ್‌ಗಳಿಗೆ ಕಳುಹಿಸಲಾಗುತ್ತಿದೆ. ಕೆಲ ಲ್ಯಾಬ್‌ಗಳಿಗೆ ಸರ್ಕಾರಿ ವೈದ್ಯರೇ ಪಾಲುದಾರರಾಗಿದ್ದಾರೆ. ಹೀಗಾಗಿ ಇದನ್ನು ತಪ್ಪಿಸಲು ರಕ್ತಪರೀಕ್ಷೆ, ಎಂಆರ್‌ಐ, ಸಿಟಿ ಸ್ಕ್ಯಾನ್ ಸೇರಿ ಯಾವುದೇ ತರಹದ ಪರೀಕ್ಷೆಗಳಿಗೆ ಶುಲ್ಕ ಪಡೆಯುವಂತಿಲ್ಲ ಎಂದು ಹೇಳಿದರು.

Edited By : Vijay Kumar
PublicNext

PublicNext

11/11/2020 07:26 pm

Cinque Terre

105.53 K

Cinque Terre

20

ಸಂಬಂಧಿತ ಸುದ್ದಿ