ಬೆಂಗಳೂರು: ಉತ್ತರ ಪ್ರದೇಶದ ಹತ್ರಾಸ್ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ನಟಿ, ರಾಜಕಾರಣಿ ರಮ್ಯಾ ತಮ್ಮ ಫೇಸ್‌ಬುಕ್‌ನಲ್ಲಿ ತಮ್ಮ ಫೋಟೋ ಶೇರ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ಹತ್ರಾಸ್ ಅತ್ಯಾಚಾರ ದುಷ್ಕೃತ್ಯದ ಬಗ್ಗೆ ನಾನು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಉತ್ತರ ಪ್ರದೇಶದ ಸರ್ಕಾರವು ಸಂತ್ರಸ್ತೆಯ ಕುಟುಂಬಸ್ಥರನ್ನು ಅವರ ಮನೆಯಲ್ಲಿ ಬಂಧಿಸಿದೆ. ಈ ವಿಚಾರ ನನ್ನನ್ನು ಆಘಾತಗೊಳಿಸಿದ್ದು, ಸಂತ್ರಸ್ತೆಯ ಕುಟುಂಬಸ್ಥರು ಮಾಡಿರು ಅಪರಾಧವೇನು ? ಅವರ ಮಗಳ ಮೇಲೆ ಅತ್ಯಾಚಾರ ನಡೆದಿದೆ. ನಾಲ್ವರು ಕಾಮುಕುರು ಕ್ರೂರವಾಗಿ ಯುವತಿಯ ಮೇಲೆ ಅತ್ಯಾಚಾರ ಎಸೆಗಿದ್ದಾರೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆ ನಿಧನವಾಗಿದ್ದು, ಆಕೆಯ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಲು ಪೋಷಕರಿಗೆ ಅವಕಾಶ ನೀಡಲಿಲ್ಲ. ಉತ್ತರ ಪ್ರದೇಶದ ಪೊಲೀಸರು ಕುಟುಂಬಸ್ಥರ ಅನುಮತಿಯಿಲ್ಲದೆ, ಯಾವುದೇ ಮಾಹಿತಿ ನೀಡದೆ ಮುಂಜಾನೆ 2:30 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ' ಎಂದು ರಮ್ಯಾ ಕಿಡಿಕಾರಿದ್ದಾರೆ.
ಇದು ಅತ್ಯಂತ ಕ್ರೂರ, ಅದಲ್ಲದೆ ಸಂತ್ರಸ್ತೆಯ ಕುಟುಂಬಸ್ಥರನ್ನು ಲಾಕ್ ಮಾಡಲಾಗಿದೆ ಹಾಗೂ ಅವರ ಫೋನ್‌ಗಳನ್ನು ಕಿತ್ತುಕೊಳ್ಳಲಾಗಿದೆ. ಅವರನ್ನು ಭೇಟಿ ಮಾಡಲು ಮಾಧ್ಯಮಗಳಿಗೆ ಅಥವಾ ಯಾವುದೇ ವಿರೋಧ ಪಕ್ಷದ ನಾಯಕರಿಗೆ ಅವಕಾಶ ನೀಡುತ್ತಿಲ್ಲ. ಸಂತ್ರಸ್ತೆಯ ಮನೆ, ಗ್ರಾಮ ಪ್ರವೇಶ ಮತ್ತು ಹೆದ್ದಾರಿಗೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದಾರೆ. ಕುಟುಂಬವನ್ನು ಭೇಟಿಯಾಗಲು ಪ್ರಯತ್ನಿಸಿದ ನಾಯಕರನ್ನು ಬಂಧಿಸಿ, ಥಳಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಯುವತಿಯ ಕುಟುಂಬ ಏನು ತಪ್ಪು ಮಾಡಿದೆ? ತಮ್ಮ ಮಗಳನ್ನು ಕಳೆದುಕೊಂಡಿದ್ದಲ್ಲದೆ ಅವರು ಯಾಕೆ ಆಘಾತಕ್ಕೊಳಗಾಗಬೇಕು? ಅವರಿಗ್ಯಾಕೆ ಈ ಕಿರುಕುಳ? ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ. ಉತ್ತರ ಪ್ರದೇಶ ಸರ್ಕಾರ ಯಾವ ನಿಯಮವನ್ನುಅನುಸರಿಸುತ್ತಿದೆ? ಇದು ಮೋದಿ ವೈಫಲ್ಯ ಮುಚ್ಚಿಹಾಕುವ/ ದೂರವಿಡುವ ತಂತ್ರವೇ? ಇದದೆಲ್ಲದಕ್ಕಿಂತ ಹೆಚ್ಚಾಗಿ ಪೊಲೀಸರು ಈ ಎಲ್ಲವನ್ನು ಮತ್ತು ಅತ್ಯಾಚಾರವನ್ನು ನಿರಾಕರಿಸುತ್ತಾರೆ ಎಂದು ರಮ್ಯಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
PublicNext
03/10/2020 04:19 pm