ಕುಂದಾಪುರ: ರಾಜ್ಯ ಸರಕಾರದ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. 'ನಾನಂತೂ 67 ವರ್ಷದಿಂದ ಹಿಂದೂ ಸಂಘಟನೆಗಳಲ್ಲಿ ಹೋರಾಟ ಮಾಡುತ್ತಿದ್ದೇನೆ. ನಮ್ಮ ಎಲ್ಲಾ ಹೋರಾಟದ ಲಾಭ ಬಿಜೆಪಿಗೆ ಹೋಗುತ್ತಿದೆ. ಆದರೆ ಬಿಜೆಪಿಯವರು ಸ್ಪಂದಿಸುತ್ತಿಲ್ಲ. ನನ್ನ ಕಾರ್ಯಕ್ರಮಕ್ಕೆ ಬಿಜೆಪಿಯವರೇ ಅಡ್ಡಿಪಡಿಸುತ್ತಿದ್ದಾರೆ' ಎಂದು ಗುಡುಗಿದ್ದಾರೆ.
ಕುಂದಾಪುರದಲ್ಲಿ ಮಾತನಾಡಿದ ಅವರು, ಕೋಲಾರ, ಉಡುಪಿ, ಕಲಬುರ್ಗಿ ಜಿಲ್ಲೆಗೆ ನನಗೆ ಬ್ಯಾನ್ ಮಾಡಿದರು. ಕಾಂಗ್ರೆಸ್ ಇದ್ದಾಗಲೂ ಬ್ಯಾನ್, ಜೈಲು. ಬಿಜೆಪಿ ಇದ್ದಾಗಲೂ ಬ್ಯಾನ್, ಕೇಸು ಜೈಲು. ಬಿಜೆಪಿ ನನ್ನನ್ನು ಬ್ಯಾನ್ ಮಾಡುತ್ತದೆ ಅಂದ್ರೆ ಹೇಗೆ? ನೀವು ಬ್ಯಾನ್ ಮಾಡುತ್ತಿರುವುದು ನನ್ನನ್ನಲ್ಲ, ಹಿಂದುತ್ವವನ್ನು. ಹಿಂದೂ ಸಿದ್ಧಾಂತವನ್ನು ಬ್ಯಾನ್ ಮಾಡುತ್ತಿದ್ದೀರಿ. ಹಿಂದೂಗಳಿಂದಲೇ ಗೆದ್ದು ಬಂದವರು ನೀವು. ಹಿಂದೂಗಳನ್ನೇ ನೀವು ತಡೆಯುತ್ತೀರಿ ಅಂದರೆ ಮುಂದಿನ ದಿನ ನಿಮಗೆ ಪಾಠ ಕಲಿಸಬೇಕಾಗುತ್ತೆ. ದೇಶದ ಹಿತಕ್ಕಾಗೆ ಹಿಂದೂ ಸಂಘಟಕರು ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
PublicNext
25/04/2022 12:21 pm