ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಚಿವರ ಸಭೆಯಲ್ಲಿ ನಿದ್ದೆ ಮಾಡಿದ ಅಧಿಕಾರಿಗಳು: ಜೊಲ್ಲೆ ಗರಂ

ವಿಜಯಪುರ: ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕೆಲ ಅಧಿಕಾರಿಗಳು ಗಡದ್ದಾಗಿ ನಿದ್ದೆ ಮಾಡಿದ್ರೆ ಇನ್ನೂ ಕೆಲ ಅಧಿಕಾರಿಗಳು ತಮ್ಮ ಮೊಬೈಲ್ ಫೋನಿನಲ್ಲಿ ಬ್ಯುಸಿಯಾಗಿದ್ರು. ಇದನ್ನೆಲ್ಲ ನೋಡಿ ಸಹನೆ ಕಳೆದುಕೊಂಡ ಸಚಿವೆ ಜೊಲ್ಲೆ ಬೇಜವಬ್ದಾರಿತನ ತೋರಿದ ಅಧಿಕಾರಿಗಳನ್ನು ಸಭೆಯಲ್ಲೇ ಹಿಗ್ಗಾ-ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಜಯಪುರದ ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಸಭೆಯಲ್ಲಿ ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗಿ ಆಗಿದ್ದರು. ವಿವಿಧ ಇಲಾಖೆಗಳ ಪ್ರಮುಖ ವಿಷಯಗಳು ಚರ್ಚೆ ಆಗುವ ವೇಳೆ ಇಲಾಖಾ ಅಧಿಕಾರಿಯೊಬ್ಬರು ಮೊಬೈಲ್ ನಲ್ಲಿ ಫುಲ್ ಬ್ಯುಸಿ ಆಗಿದ್ರು. ಇದನ್ನು ಗಮನಿಸಿದ ಸಚಿವೆ ಶಶಿಕಲಾ ಜೊಲ್ಲೆ, ಅಧಿಕಾರಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು.

Edited By : Nagaraj Tulugeri
PublicNext

PublicNext

27/02/2021 07:53 am

Cinque Terre

73.37 K

Cinque Terre

2

ಸಂಬಂಧಿತ ಸುದ್ದಿ