", "articleSection": "Politics,Editorial", "image": { "@type": "ImageObject", "url": "https://prod.cdn.publicnext.com/s3fs-public/387839-1737214063-Untitled-design---2025-01-18T205732.709.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಯಾಕೋ ಭಿನ್ನಮತ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಮತ್ತೆ ...Read more" } ", "keywords": "There's speculation that Yatnal may contest against Vijayendra for the Karnataka BJP state president position. However, I couldn't find any recent updates or confirmations on this matter. ,,Politics,Editorial", "url": "https://publicnext.com/article/nid/Politics/Editorial" }
ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಯಾಕೋ ಭಿನ್ನಮತ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಮತ್ತೆ ಬಹಿರಂಗವಾಗಿ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಅದು ಅಲ್ಲದೆ ಬಿವೈ ವಿಜಯೇಂದ್ರ ವಿರುದ್ಧ ಯತ್ನಾಳ್ ಆ್ಯಂಡ್ ಟೀಂ ಈಗ ಹೊಸ ಗಾಳವೊಂದನ್ನ ಹಾಕಲು ಸಜ್ಜಾಗಿದೆ. ಮುಂಬರುವ ರಾಜ್ಯಾಧ್ಯಕ್ಷರ ಚುನಾವಣೆಯಲ್ಲಿ ಬಿ.ವೈ ವಿಜಯೇಂದ್ರ ಎದುರು ಯತ್ನಾಳ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ರಾಜ್ಯಾಧ್ಯಕ್ಷರ ಚುನಾವಣೆಯಲ್ಲಿ ವಿಜಯೇಂದ್ರ ವಿರುದ್ಧ ಸ್ಪರ್ಧಿಸಿ ಟಕ್ಕರ್ ಕೊಡುವ ಪ್ಲಾನ್ ಯತ್ನಾಳ್ ಆ್ಯಂಡ್ ಟೀಂ ಸಜ್ಜಾಗುತ್ತಿದೆ. ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ ರಾಜ್ಯ ಘಟಕದವರ ಅಭಿಪ್ರಾಯ ಸಂಗ್ರಹ ಮಾಡಿ ಚುನಾವಣೆ ಮಾಡ್ಲಿ ಅನ್ನೋದು ಯತ್ನಾಳ್ ಟೀಂ ವಾದ.
ಈಗ ತಾಲ್ಲೂಕು ಘಟಕಗಳಿಗೆ ಚುನಾವಣೆ ನಡೆಯುತ್ತಿದೆ, ನಂತರ ಬಳಿಕ ಜಿಲ್ಲಾ ಘಟಕದ ಚುನಾವಣೆ ನಡೆಯಲಿದೆ ಇವೆಲ್ಲವೂ ಮುಗಿದ ಬಳಿಕ ಫೆಬ್ರವರಿಯಲ್ಲಿ ರಾಜ್ಯಾಧ್ಯಕ್ಷರ ಚುನಾವಣೆ ನಡೆಯಲಿದೆ, ಅಲ್ಲಿ ವಿಜಯೇಂದ್ರ ವಿರುದ್ಧ ಯತ್ನಾಳ್ ಸ್ಪರ್ಧಿಸಿ ವಿಜಯೇಂದ್ರಗೆ ಮುಖಭಂಗವಾಗುವಂತೆ ಮಾಡಲು ಯತ್ನಾಳ್ ಅಂಡ್ ಟೀಂ ತಾಯರಿ ನಡೆಸುತ್ತಿದ್ದಾರೆ ಎಂದು ಪಕ್ಷದವಯದಲ್ಲೇ ಚರ್ಚೆ ನಡೆಯುತ್ತಿದೆ.
ಒಂದು ವೇಳೆ ವಿಜಯೇಂದ್ರ ವಿರುದ್ಧ ಯತ್ನಾಳ್ ಸ್ಪರ್ಧಿಸಿದ್ದೇಯಾದ್ರೆ ಇದೇ ಮೊದಲ ಬಾರಿಗೆ ಹೈಕಮಾಂಡ್ ಸೂಚಿಸಿದ ವ್ಯಕ್ತಿ ಎದುರು ಪಕ್ಷದಲ್ಲಿ ವಿರುದ್ಧವಾಗಿ ಚುನಾವಣೆಗೆ ಸ್ಪರ್ಧಿಸಿದಂತೆಯಾಗಲಿದೆ. ವಿಜಯೇಂದ್ರ ವಿರುದ್ಧ ಸ್ಪರ್ಧಿಸಿದ್ರು ಜಿಲ್ಲಾಧ್ಯಕ್ಷರಗಳು ವಿಜಯೇಂದ್ರ ಪರವಾಗಿ ಇರ್ತಾರೆ ಆದ್ರೆ ಇಲ್ಲಿ ಗೆಲುವು ಗಿಂತ ವಿಜಯೇಂದ್ರಗೆ ಮುಜುಗರ ಮಾಡಬೇಕು ಎಂಬ ಉದ್ದೇಶ ಯತ್ನಾಳ್ ಅಂಡ್ ಟೀಂ ಪ್ಲಾನ್...
ಯತ್ನಾಳ್ ಆ್ಯಂಡ್ ಟೀಂ ರಾಜ್ಯಾಧ್ಯಕ್ಷರ ಚುನಾವಣೆಗೆ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆಸಿರುವ ವಿಜಯೇಂದ್ರ ನನ್ನ ಒಂದು ವರ್ಷದ ಕೆಲಸ ಕಾರ್ಯವನ್ನ ನೋಡಿ ನನ್ನನ್ನೇ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸುತ್ತಾರೆ ಎಂದು ವಿಜಯೇಂದ್ರ ಹೇಳಿದ್ದಾರೆ. ಆದ್ರೆ ಶತಾಯ ಗತಾಯ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷರ ಸ್ಥಾನದಿಂದ ತಗೆಯಲೇಬೇಕು ಎಂದು ಯತ್ನಾಳ್ ಅಂಡ್ ಟೀಂ ಹಲವು ಕಸರತ್ತುಗಳನ್ನ ಮಾಡ್ತಿದ್ದಾರೆ.
ಈಗ ರಾಜ್ಯ ಬಿಜೆಪಿಯಲ್ಲಿ ಹುಟ್ಟಿಕೊಂಡಿರುವ ಈ ಜಿದ್ದು ಮುಂದಿನ ದಿನಗಳಲ್ಲಿ ಇನ್ನೂ ತಾರಕ್ಕಕ್ಕೆ ಹೋಗುವ ಎಲ್ಲಾ ಸಾಧ್ಯತೆಗಳಿವೆ. ಈ ಎಲ್ಲಾ ಬೆಳವಣಿಗೆ ಬಗ್ಗೆ ಬ್ರೇಕ್ ಹಾಕಬೇಕು ಎಂದರೆ ಅದು ಹೈಕಮಾಂಡ್ ಗೆ ಮಾತ್ರ ಈಗ ಬಿಜೆಪಿ ಹೈಕಮಾಂಡ್ ಈ ಗೊಂದಲವನ್ನ ಹೇಗೆ ಸರಿಪಡಿಸಲಿದೆ ? ವಿಜಯೇಂದ್ರ ವಿರುದ್ಧ ಇಷ್ಟು ರೆಬಲ್ಸ್ ಆಗಿರುವ ಯತ್ನಾಳ್ ಅಂಡ್ ಟೀಂ ನ ಹೇಗೆ ಸಮಾಧಾನಿಸಲಿದೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಶರತ್ ಕಪ್ಪನಹಳ್ಳಿ,ರಾಜಕೀಯ ವರದಿಗಾರ
PublicNext
18/01/2025 08:52 pm