ಯಾದಗಿರಿ: ತಮ್ಮ ಸ್ವಾಗತದ ವೇಳೆ ಯಾರೂ ಗುಂಡು ಹಾರಿಸಿಲ್ಲ. ಅವರು ಗುಂಡು ಹಾರಿಸಿದ್ದರೆ ನಾವೇ ಕರೆಸಿ ಮಾತಾಡುತ್ತಿದ್ದೆವು. ಕೇವಲ ಪಟಾಕಿ ಪುಡಿ ಹಾಕಿ ಸದ್ದು ಮಾಡಿದ್ದಾರೆ. ಇದು ನಮ್ಮ ಭಾಗದಲ್ಲಿ ವಾಡಿಕೆ ಬೇಕಿದ್ದರೆ ಇತಿಹಾಸ ತೆಗೆದು ನೋಡಿ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಮ್ಮ ಬೆಂಬಲಿಗರ ನಡೆ ಬಗ್ಗೆ ಸಮರ್ಥನೆ ನೀಡಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಗುಂಡು ಹಾರಿಸಿಲ್ಲ ಅದನ್ನು ತಿರುಚಬೇಡಿ. ತಪ್ಪು ಮಾಡಿದ್ರೆ ಸರ್ಕಾರ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೆ. ಅದೊಂದು ವಾಡಿಕೆ ಇದೆ. ದೇವರ ದಯೆಯಿಂದ ಯಾವುದೇ ಅವಘಡ ಆಗಿಲ್ಲ. ಇದು ಸತ್ಯಕ್ಕೆ ದೂರವಾದದ್ದು, ಅದು ನಾಡಬಂದೂಕು ಅಲ್ಲ ಎಂದು ಮತ್ತೆ ಮತ್ತೆ ಹೇಳಿದರು.
PublicNext
19/08/2021 08:24 am