ಪಂಜಾಬ್: ಪಂಜಾಬ್ನ ಜಲಾಲಾಬಾದ್ನಲ್ಲಿ ಉದ್ರಿಕ್ತ ಗುಂಪುವೊಂದು ಅಕಾಲಿ ದಳ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಅವರ ವಾಹನದ ಮೇಲೆ ಕಲ್ಲು ತೂರಾಟ ಮಾಡಿ ಫೈರಿಂಗ್ ನಡೆಸಿದೆ. ಈ ಸಂಬಂಧ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಏಕಾಏಕಿ ದಾಳಿಗೆ ಕಾರಣವೇನೆಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ ಕೃತ್ಯದ ಹಿಂದೆ ಕಾಂಗ್ರೆಸ್ ಶಾಸಕರೊಬ್ಬರ ಸಹೋದರನ ಕೈವಾಡವಿದೆ ಎಂದು ಅಕಾಲಿ ದಳ ಯುವ ಘಟಕದ ಮುಖ್ಯಸ್ಥ ಪರಂಬನ್ಸ್ ಸಿಂಗ್ ರೊಮಾನಾ ಆರೋಪಿಸಿದ್ದಾರೆ.
ಸುಖಬೀರ್ ಬಾದಲ್ ಅವರು ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಪಕ್ಷದ ಅಭ್ಯರ್ಥಿಗಳೊಂದಿಗೆ ಕಾರಿನಲ್ಲಿ ಜಲಾಲಾಬಾದ್ ಎಸ್‌ಡಿಎಂ ಕಚೇರಿಗೆ ಹೊರಟಿದ್ದರು. ಈ ವೇಳೆ ಗುಂಪುವೊಂದು ದಾಳಿ ನಡೆಸಿದೆ. ಪರಿಣಾಮ ಮೂವರು ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಸುಖಬೀರ್ ಅವರಿಗೆ ಯಾವುದೇ ಹಾನಿ ಸಂಭವಿಸಿಲ್ಲ.
PublicNext
02/02/2021 02:35 pm