ಭೋಪಾಲ್: ಹಳೆಯ ದ್ವೇಷದ ಹಿನ್ನೆಲೆ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಮಧ್ಯಪ್ರದೇಶದ ನಾರದಪುರಂ ಜಿಲ್ಲೆಯ ಇಟಾರ್ಸಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. 28 ವರ್ಷ ವಯಸ್ಸಿನ ರೋಹಿತ್ ಸಿಂಗ್ ರಜಪೂತ್ ಎಂಬಾತನೇ ಕೊಲೆಯಾದ ಯುವಕ. ಸದ್ಯ ಇದರ ವಿಡಿಯೋ ವೈರಲ್ ಆಗುತ್ತಿದೆ.
ಇಟಾರ್ಸಿಯ ಕರ್ಣಿ ಸೇನೆಯ ಪಟ್ಟಣ ಕಾರ್ಯದರ್ಶಿಯಾಗಿದ್ದ ರೋಹಿತ್ ಸಿಂಗ್ ರಜಪೂತ್ ಮೇಲೆ ಪುರಸಭೆ ಕಚೇರಿ ಎದುರಲ್ಲೇ ಮೂವರು ವ್ಯಕ್ತಿಗಳು ಚಾಕುವಿನಿಂದ ಇರಿದಿದ್ದಾರೆ. ಆತನನ್ನು ರಕ್ಷಿಸಲು ಮುಂದಾದಾಗ ಆತನ ಸ್ನೇಹಿತ ಸಚಿನ್ ಪಟೇಲ್‌ಗೂ ಇರಿದಿದ್ದಾರೆ. ಕೂಡಲೇ ಅಲ್ಲಿದ್ದವರು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಚಿಕಿತ್ಸೆ ಫಲಿಸದೇ ರಜಪೂತ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ, ಪಟೇಲ್ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಹಳೆಯ ವಿವಾದದ ದ್ವೇಷದ ಹಿನ್ನೆಲೆಯಲ್ಲಿ ರೋಹಿತ್ ಸಿಂಗ್ ರಜಪೂತ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಟಾರ್ಸಿ ಪೊಲೀಸ್ ಠಾಣೆಯ ಪ್ರಭಾರಿ ಆರ್ ಎಸ್ ಚೌಹಾಣ್ ಹೇಳಿದ್ದಾರೆ. ಇದೀಗ ಮೂವರು ಆರೋಪಿಗಳಾದ ರಾಹುಲ್ ರಜಪೂತ್, ಅಂಕಿತ್ ಭಟ್ ಮತ್ತು ಇಶು ಮಾಳವಿಯಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
PublicNext
05/09/2022 11:59 am