ನವದೆಹಲಿ:ದೆಹಲಿ ಪೊಲೀಸರು ನನ್ನ ಬಟ್ಟೆ ಹರೆದರು. ನಮ್ಮಲ್ಲೆ ನಿರ್ದಾಕ್ಷಣ್ಯವಾಗಿಯೇ ಹಲ್ಲೆ ಮಾಡಿದರು. ಇವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲೇಬೇಕು. ಹೀಗಂತ ಕಾಂಗ್ರೆಸ್ ಪಕ್ಷದ ಸಂಸದೆ ಜ್ಯೋತಿಮಣಿ ಆರೋಪ ಮಾಡಿದ್ದಾರೆ. ಈ ಒಂದು ವೀಡಿಯೋವನ್ನ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಶಶಿ ತರೂರ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ದೆಹಲಿಯ ಇಡಿ ಕಚೇರಿ ಎದುರು ರಾಹುಲ್ ಗಾಂಧಿ ವಿಚಾರಣೆ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಪ್ರತಿಭಟನೆ ಮಾಡ್ತಾನೇ ಇದ್ದಾರೆ. ಈ ವೇಳೆನೆ ದೆಹಲಿ ಪೊಲೀಸರು ಅವರನ್ನ ಅರೆಸ್ಟ್ ಕೂಡ ಮಾಡಿದ್ದಾರೆ. ಅದನ್ನ ವಿರೋಧಿಸಿದಾಗ ಎತ್ತಿ ವಾಹನಕ್ಕೂ ಹಾಕಿ ಬಿಟ್ಟಿದ್ದಾರೆ.
ಹೀಗೆ ಪ್ರತಿಭಟನಾಕಾರರಲ್ಲಿ ಸಂಸದೆ ಜ್ಯೋತಿಮಣಿ ಸೇರಿ ಎಲ್ಲರ ಮೇಲೂ ಹಲ್ಲೆ ಮಾಡಲಾಗಿದೆಯಂತೆ. ಹಾಗಂತ ಸ್ವತಃ ಜ್ಯೋತಿಮಣಿ ಹೇಳಿಕೊಂಡಿದ್ದರು. ದೆಹಲಿ ಪೊಲೀಸರು ಸರಿ ಇಲ್ಲ. ಮಹಿಳಾ ಸಂಸದೆ ಅಂತಲೂ ನೋಡದೆ ಬಟ್ಟೆ ಹರಿದ್ದಾರೆ. ನನ್ನ ಶೂ ತೆಗೆಸಿ, ಕ್ರಿಮಿನಲ್ ತರ ವರ್ತಿಸಿದ್ದಾರೆ. ಕುಡಿಯಲು ನೀರೂ ಕೂಡ ಕೊಡಲಿಲ್ಲ. ನೀರು ಮಾರೋ ಹುಡುಗರಿಗೂ ನೀರು ಕೊಡಲೇ ಬೇಡ ಅಂತಲೂ ಹೇಳಿದ್ದಾರೆ ಅಂತಲೂ ಜ್ಯೋತಿಮಣಿ ದೂರಿದ್ದಾರೆ.
ಮಾಜಿ ಸಚಿವರ ಶಶಿ ತರೂರ್ ದೆಹಲಿ ಪೊಲೀಸರ ಈ ಒಂದು ಕ್ರೌರ್ಯವನ್ನ ಖಂಡಿಸಿದ್ದಾರೆ. ಸ್ಪೀರ್ ಓಂ ಬಿರ್ಲಾ ಅವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಅಂತಲೂ ಟ್ವಿಟರ್ ಮೂಲಕ ಒತ್ತಾಯಿಸಿದ್ದಾರೆ.
PublicNext
16/06/2022 03:31 pm