ಬೆಂಗಳೂರು: ಇಡೀ ಬೆಂಗಳೂರು ಬೆಚ್ಚಿ ಬಿಳುವಂತೆ ಮಾಡಿದ ಘಟನೆ ಡೆಜೆ ಹಳ್ಳಿ ಪ್ರಕರಣವನ್ನಾ ಇನ್ನೂ ಯಾರು ಮರೆತಿರಲು ಸಾಧ್ಯವಿಲ್ಲ.
ಸಧ್ಯ ಈ ಕೇಸ್ ಗೆ ಸಂಬಂಧಿಸಿದಂತೆ ಬೆಂಕಿ ಹಚ್ಚಿಸಿ ತಲೆಮರೆಸಿಕೊಂಡಿದ್ದ ಬಿಬಿಎಂಪಿ ಮಾಜಿ ಮೇಯರ್ ಸಂಪತ್ ರಾಜ್ ಕೊನೆಗೂ ಅರೆಸ್ಟ್ ಆಗಿದ್ದಾರೆ.
ಈ ಸಂಬಂಧ ಮಾತನಾಡಿದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.
ಮಾಧ್ಯಮಗಳು, ಪೊಲೀಸರು ನನಗೆ ನ್ಯಾಯ ಕೊಡಿಸಿದ್ದಾರೆ. ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ನನ್ನ ಬೆನ್ನಿಗೆ ನಿಂತಿದೆ.
ನಮ್ಮ ಕೆಪಿಸಿಸಿ ಅಧ್ಯಕ್ಷರು ಈಗಲಾದ್ರೂ ನಮ್ಮ ಪರ ನಿಲ್ಲಲಿ. ನನ್ನ ಪರ ಯಾಕೆ ನಿಂತಿಲ್ಲವೆಂದು ಇಂದು ಡಿಕೆ ಶಿವಕುಮಾರ್ ಅವರಿಗೆ ಕೇಳುತ್ತೇನೆ.
ಸಂಪತ್ ರಾಜ್ ಆಸ್ಪತ್ರೆಯಿಂದ ಏಕೆ ಓಡಿ ಹೋಗಬೇಕಿತ್ತು. ಅವರು ತಪ್ಪು ಮಾಡಿದ್ದರಿಂದ ಓಡಿ ಹೋಗಿದ್ದಾರೆ.
ನಾನು ಯಾವುದೇ ದ್ವೇಷದ ರಾಜಕಾರಣವನ್ನು ಮಾಡಿಲ್ಲ. ಈ ಹಿಂದೆಯೂ ಮಾಡಿಲ್ಲ, ಇನ್ನುಮುಂದೆಯೂ ಮಾಡಲ್ಲ. ಸಂಪತ್ ರಾಜ್ ನನ್ನ ಜತೆ ಚೆನ್ನಾಗಿಯೇ ಇದ್ದರು.
ನನ್ನ ಜತೆಗಿದ್ದು ಇಂತಹ ಕೆಲಸ ಮಾಡುತ್ತಾರೆಂದು ಗೊತ್ತಿರಲಿಲ್ಲ. ಘಟನೆಯ ಬಳಿಕ ಸಂಪತ್ ರಾಜ್ ರನ್ನ ಭೇಟಿಯಾಗಿಲ್ಲ.
ಕಾಂಗ್ರೆಸ್ ಕೂಡ ನಮ್ಮನ್ನು ಕರೆಸಿ ಮಾತನಾಡಿಲ್ಲ ಎಂದು ಹೇಳಿದ್ದಾರೆ.
ಇನ್ನು ನನಗೆ ನ್ಯಾಯ ಕೊಡಿಸುವುದಾಗಿ ಡಿಕೆಶಿ ಮಾತ್ರ ಹೇಳಿದ್ದಾರೆ. ನನಗೆ ಕಾಂಗ್ರೆಸ್ ಪಕ್ಷ ರಕ್ಷಣೆಗೆ ನಿಂತಿದೆ.
ಘಟನೆಯ ಬಗ್ಗೆ ಹೈಕಮಾಂಡ್ ಗಮನಕ್ಕೂ ತರುತ್ತೇನೆ. ಎಂದು ಅಖಂಡ ಶ್ರೀನಿವಾಸಮೂರ್ತಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
PublicNext
17/11/2020 09:41 am