ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟಾಟಾ ಪ್ರಾಜೆಕ್ಟ್ಸ್ ಲಂಚ ಪ್ರಕರಣ: ಪಿಜಿಸಿಐಎಲ್ ನಿರ್ದೇಶಕ ಸೇರಿ ಆರು ಜನ ಬಂಧನ

ನವದೆಹಲಿ: ಟಾಟಾ ಪ್ರಾಜೆಕ್ಟ್ಸ್ ಒಳಗೊಂಡ ಲಂಚ ಪ್ರಕರಣದಲ್ಲಿ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಎಸ್ ಝಾ ಸೇರಿದಂತೆ ಆರು ಜನರನ್ನು ಜುಲೈ 7 ರಂದು ಕೇಂದ್ರೀಯ ತನಿಖಾ ದಳ ಬಂಧಿಸಿದೆ.

ಬಂಧಿತ ಇತರ ಐವರು ಕಾರ್ಯನಿರ್ವಾಹಕರಲ್ಲಿ ಟಾಟಾ ಪ್ರಾಜೆಕ್ಟ್ಸ್‌ ಕಾರ್ಯನಿರ್ವಾಹಕ ಉಪಾಧ್ಯಕ್ಷ ದೇಶರಾಜ್ ಪಾಠಕ್ ಮತ್ತು ಸಹಾಯಕ ಉಪಾಧ್ಯಕ್ಷ ಆರ್‌.ಎನ್‌ ಸಿಂಗ್ ಅವರಂತಹ ಉನ್ನತ ಶ್ರೇಣಿಯ ಅಧಿಕಾರಿಗಳೂ ಸೇರಿದ್ದಾರೆ. ಖಾಸಗಿ ಕಂಪನಿಗೆ ಅನುಕೂಲ ಮಾಡಿಕೊಡಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಈ ಬಂಧನಗಳು ನಡೆದಿವೆ.

ಬಿ.ಎಸ್ ಝಾ ಮತ್ತು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್‌ನ ಇತರ ಐವರು ಅಧಿಕಾರಿಗಳನ್ನು ಈಶಾನ್ಯ ಪ್ರಾದೇಶಿಕ ವಿದ್ಯುತ್ ವ್ಯವಸ್ಥೆ ಸುಧಾರಣೆ ಯೋಜನೆಯಲ್ಲಿನ ಭ್ರಷ್ಟಾಚಾರದ ಆರೋಪದ ಮೇಲೆ ಸಿಬಿಐ ಬಂಧಿಸಿದೆ. ಬಿ.ಎಸ್‌ ಝಾ ಲಂಚ ಪಡೆದು ಇದಕ್ಕೆ ಪ್ರತಿಯಾಗಿ ವಿವಿಧ ಯೋಜನೆಗಳಲ್ಲಿ ಟಾಟಾ ಪ್ರಾಜೆಕ್ಟ್ಸ್‌ಗೆ ಒಲವು ತೋರುತ್ತಿದ್ದರು ಎಂದು ಆರೋಪಿಸಲಾಗಿದೆ.

Edited By : Nagaraj Tulugeri
PublicNext

PublicNext

07/07/2022 07:50 pm

Cinque Terre

99.77 K

Cinque Terre

0

ಸಂಬಂಧಿತ ಸುದ್ದಿ