ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾರಿಗೆ ನೌಕರರ ಸಂಬಳಕ್ಕೆ ಹಣವೇ ಇಲ್ಲ: ಸವದಿ

ಬೆಳಗಾವಿ- ಕೆ ಎಸ್ ಆರ್ ಟಿ ಸಿ ಹಾಗೂ ಬಿಎಂಟಿಸಿ ನೌಕರರಿಗೆ ಸಂಬಳ ನೀಡಲು ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣವೇ ಇಲ್ಲ. ಹೀಗಾಗಿ ಮೂರು ತಿಂಗಳಿಂದ ಸಾರಿಗೆ ನೌಕರರಿಗೆ ಸಂಬಳ ಕೊಡಲಾಗಿಲ್ಲ.

ಈ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಸಾರಿಗೆ ನೌಕರರ ಸಂಬಳಕ್ಕೆ ಪ್ರತಿ ತಿಂಗಳು 325 ಕೋಟಿ ಬೇಕು. ಇನ್ನೂ ಮೂರು ತಿಂಗಳು ಸರ್ಕಾರವೇ ಹಣ ನೀಡಬೇಕೆಂದು ಪ್ರಸ್ತಾವನೆ ಸಲ್ಲಿಸಿದ್ದೇವೆ. ಮೂರ್ನಾಲ್ಕು ದಿನಗಳಲ್ಲಿ ಮತ್ತೊಮ್ಮೆ ಸಿಎಂ ಗೆ ಮನವಿ ಮಾಡಿಕೊಂಡು ಸಂಬಳ ಬಿಡುಗಡೆ ಮಾಡುವಂತೆ ಕೇಳುತ್ತೇನೆ ಎಂದು ಸವದಿ ಹೇಳಿದರು.

ನಾವು ಕಳಿಸಿದ್ದ ಪ್ರಸ್ತಾವನೆ ವಾಪಸ್ ಬಂದಿದೆ. ಪ್ರತಿ ತಿಂಗಳು ಸಂಬಳ ಬಂದಾಗ ನೌಕರರು ಖುಷಿಯಾಗ್ತಾರೆ. ಇಲ್ಲದಿದ್ರೆ ಅಸಮಾಧಾನ ಪಡುತ್ತಾರೆ‌. ಹೀಗಾಗಿ ಮೂರ್ನಾಲ್ಕು ದಿನಗಳಲ್ಲಿ ಸಂಬಳ ಕೊಡಿಸುತ್ತೇನೆ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

14/11/2020 04:35 pm

Cinque Terre

117.35 K

Cinque Terre

26

ಸಂಬಂಧಿತ ಸುದ್ದಿ