ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆಲಂಗಾಣ ಉಪಚುನಾವಣೆ: ಬಿಜೆಪಿ ಅಚ್ಚರಿಯ ಸಾಧನೆ

ಹೈದರಾಬಾದ್: ತೆಲಂಗಾಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಅಚ್ಚರಿ ಮೂಡಿಸಿದೆ. ತೆಲಂಗಾಣದ ಒಂದು ಕ್ಷೇತ್ರದಲ್ಲಿನ ಉಪ ಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.

ತೆಲಂಗಾಣದ ದುಬ್ಬಕಾ ಉಪ ಚುನಾವಣೆಯ ಕದನದಲ್ಲಿ ನಾಲ್ಕು ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ. ಬಿಜೆಪಿ ಅಭ್ಯರ್ಥಿ ಎಂ ರಘುನಂದನ್ ರಾವ್ 13055 ಮತಗಳನ್ನು ಪಡೆದು ಮುನ್ನಡೆ ಸಾಧಿಸಿದ್ದಾರೆ. ಮೊದಲ ಸುತ್ತಿನಿಂದಲೂ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದರು. ನಾಲ್ಕನೇ ಸುತ್ತಿನಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಪಕ್ಷದ ಸೊಲಿಪೆಟಾ ಸುಜಾತಾ 10375 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಚೆರುಕು ಶ್ರೀನಿವಾಸ ರೆಡ್ಡಿ ಕೇವಲ 2158 ಮತಗಳೊಂದಿಗೆ ಹಿನ್ನಡೆ ಪಡೆದಿದ್ದರು.

ಟಿಆರ್‌ಎಸ್ ಪಕ್ಷದ ಶಾಸಕರಾಗಿದ್ದ ಸೊಲಿಪೆಟಾ ರಾಮಲಿಂಗಾ ರೆಡ್ಡಿ ಅವರ ನಿಧನದಿಂದ ತೆರವಾಗಿದ್ದ ದುಬ್ಬಕಾ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಐದನೇ ಸುತ್ತಿನ ಎಣಿಕೆ ಮುಕ್ತಾಯದ ವೇಳೆಗೆ ಬಿಜೆಪಿ 16,517 ಮತ ಗಳೊಂದಿಗೆ ಮುನ್ನಡೆ ಸಾಧಿಸಿದ್ದರೆ, ಟಿಆರ್‌ಎಸ್ ಅಭ್ಯರ್ಥಿ 13,487 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ 2,724 ಮತಗಳನ್ನು ಪಡೆದಿದೆ.

Edited By : Nagaraj Tulugeri
PublicNext

PublicNext

10/11/2020 01:21 pm

Cinque Terre

44.89 K

Cinque Terre

3

ಸಂಬಂಧಿತ ಸುದ್ದಿ