ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೀದಿ ಕೋಟೆಗೆ ಚುನಾವಣಾ ಚಾಣಕ್ಯ 'ಶಾ' ಎಂಟ್ರಿ

ಕೋಲ್ಕತ್ತಾ: ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ‌ ಚುನಾವಣೆಗೆ ಮೇಲೆ ಬಿಜೆಪಿ ಹೆಚ್ಚಿನ ಗಮನ ಹರಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ, ಚುನಾವಣಾ ಚಾಣಕ್ಯ ಅಮಿತ್ ಶಾ ಅವರು ದೀದಿ ಕೋಟೆಗೆ ಎಂಟ್ರಿ ಕೊಟ್ಟಿದ್ದಾರೆ.

ಗೃಹ ಸಚಿವ ಅಮಿತ್‌ ಶಾ ಹಾಗೂ ಟಿಎಂಸಿ ಮುಖ್ಯಸ್ಥೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡುವಿನ ರಾಜಕೀಯ ಜಗಳ ಜೋರಾಗಿ ನಡೆಯುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಕೇಸರಿ ಬಾವುಟ ಹಾರಿಸಲು ಈ ಹಿಂದಿನಿಂದಲೂ ಅಮಿತ್‌ ಶಾ ಪ್ರಯತ್ನಿಸುತ್ತಲೇ ಇದ್ದರು. ಇದೀಗ ಇದಕ್ಕೆ ತೀವ್ರವಾಗಿ ಶ್ರಮಿಸುವಂತಿದೆ.

ಅಮಿತ್‌ ಶಾ ಅವರು ಗುರುವಾರ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದಾರೆ. ಚುನಾವಣೆಗೆ ಕೆಲ ತಿಂಗಳುಗಳೆ ಬಾಕಿ ಇರುವಾಗಲೇ ಅಲ್ಲಿನ ಮುಖಂಡರ ಜೊತೆ ಸಭೆ ನಡೆಸಿ ರಣತಂತ್ರವನ್ನು ಹೆಣೆಯುತ್ತಿದ್ದಾರೆ.

Edited By : Vijay Kumar
PublicNext

PublicNext

06/11/2020 02:16 pm

Cinque Terre

76.43 K

Cinque Terre

4

ಸಂಬಂಧಿತ ಸುದ್ದಿ