ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಅಮ್ಮಾಜಮ್ಮ ತೀರಿಹೋದ್ರೆ ನಮ್ಮ ಗತಿ ಏನು?

ತುಮಕೂರು: ಶಿರಾ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರು ಸಮಾವೇಶದ ವೇಳೆಯೇ ಕುಸಿದು ಬಿದ್ದಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ವೇಳೆ ವೇದಿಕೆಯ ಮೇಲೆ ಅಮ್ಮಾಜಮ್ಮ ಕುಸಿದುಬಿದ್ದಂತೆ ಜೆಡಿಎಸ್ ವರಿಷ್ಠ ಎಚ್‌.ಡಿ.ದೇವೇಗೌಡ ಅವರು 'ಅಮ್ಮಾಜಮ್ಮ ತೀರಿಹೋದರೆ ನಮ್ಮ ಗತಿ ಏನು? ಎಂದು ಕಳವಳ ವ್ಯಕ್ತಪಡಿಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆಲ ಹೊತ್ತಿನ ಬಳಿಕ ಸಮಾವೇಶದ ವೇದಿಕೆಗೆ ವಾಪಸ್ ಆದ ಅಮ್ಮಾಜಮ್ಮ ಅವರು, 'ನಿಮ್ಮೆಲ್ಲರ ಆಶೀರ್ವಾದದಿಂದ ಚೆನ್ನಾಗಿದ್ದೀನಿ' ಎಂದು ಹೇಳಿದರು.

ಬಳಿಕ ಮಾತನಾಡಿದ ಎಚ್‌.ಡಿ.ರೇವಣ್ಣ ಅವರು, 'ಅಮ್ಮಾಜಮ್ಮರ ಆರೋಗ್ಯ ಸುಧಾರಿಸಿದೆ, ಆತಂಕ ಬೇಡ. ಅವರ ಆರೋಗ್ಯ ಸರಿಯಿಲ್ಲ ಅಂತಾ ಹೇಳಿದ್ರೆ ಕಾಂಗ್ರೆಸ್ ಮತ್ತು ಬಿಜೆಪಿಯವರು ಅದನ್ನೇ ಅಪಪ್ರಚಾರ ಮಾಡುತ್ತಾರೆ' ಎಂದು ಹೇಳಿದರು.

Edited By : Vijay Kumar
PublicNext

PublicNext

01/11/2020 06:21 pm

Cinque Terre

37.97 K

Cinque Terre

2

ಸಂಬಂಧಿತ ಸುದ್ದಿ