ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಗಡಿ ಕುಟುಂಬದವರನ್ನು ಗೆಲ್ಲಿಸಲು ಶ್ರಮಿಸುತ್ತೇನೆ

ಬೆಳಗಾವಿ-ಹೈಕಮಾಂಡ್ ನನ್ನ‌ ಮೇಲೆ ಅದೇನೇ ಕ್ರಮ ಕೈಗೊಂಡರೂ ದಿ‌. ಸುರೇಶ್ ಅಂಗಡಿ ಅವರ ಕುಟುಂಬ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುತ್ತೇನೆ ಎಂದು ಕಾಂಗ್ರೆಸ್ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ‌.

ಚಿಕ್ಕೋಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದಿ‌. ಸುರೇಶ್ ಅಂಗಡಿ ಅವರ ಕುಟುಂಬದವರಿಗೆ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದರೆ ಹಳ್ಳಿ ಹಳ್ಳಿಗೂ ಸಂಚರಿಸಿ ಅವರನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಹೈಕಮಾಂಡ್ ತನಗೆ ಬೇಕಾದ ಕ್ರಮ ಜರುಗಿಸಲಿ. ಆ ಬಗ್ಗೆ ನನ್ನ ಅಭ್ಯಂತರವೇನೂ ಇಲ್ಲ ಎಂದಿದ್ದಾರೆ‌.

ಸುರೇಶ್ ಅಂಗಡಿ ಕುಟುಂಬದ ಅಭ್ಯರ್ಥಿ ಕಣಕ್ಕಿಳಿದರೆ ಪಕ್ಷ ನೋಡೋದಿಲ್ಲ. ನನ್ನ ಮಗನ ಚುನಾವಣೆಗೆ ನೆರವಾದಂತೆ ಅವರಿಗೂ ನೆರವಾಗುತ್ತೇನೆ‌‌. ಪಕ್ಷ ಬೇರೆ ಬೇರೆಯಗಿದ್ದರೂ ನಾನು ಮತ್ತು ಸುರೇಶ್ ಉತ್ತಮ ಸ್ನೇಹಿತರಾಗಿದ್ದೆವು. ಸದ್ಯ ಅವರು ನಮ್ಮೊಂದಿಗೆ ಇಲ್ಲದಿರುವುದು ನೋವಿನ ಸಂಗತಿ ಎಂದು ಪ್ರಕಾಶ್ ಹುಕ್ಕೇರಿ ವಿಷಾದ ವ್ಯಕ್ತಪಡಿಸಿದರು.

Edited By : Nagaraj Tulugeri
PublicNext

PublicNext

25/10/2020 04:16 pm

Cinque Terre

53.33 K

Cinque Terre

1

ಸಂಬಂಧಿತ ಸುದ್ದಿ